ಸಂಶಿ: ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಗ್ರಾಪಂ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಗುರುವಾರ ಪಿಂಚಣಿ ದಿನ ಆಚರಿಸಲಾಯಿತು.
ಉಪ ತಹಸೀಲ್ದಾರ್ ಶ್ರೀ ಗುಗ್ಗರಿ, ಮಾತನಾಡಿ, ‘ಹಿರಿಯ ನಾಗರಿಕರಿಗೆ ಪಿಂಚಣಿ, ವಿಧವಾ, ಅಂಗವಿಕಲ, ಮನಸ್ವಿನಿ ವೇತನದ ಪ್ರಯೋಜನ ಪಡೆಯದಿರುವವರು ಗ್ರಾಮ ಲೆಕ್ಕಿಗರಲ್ಲಿ ಮನವಿ ಸಲ್ಲಿಸಿ ಸರ್ಕಾರದ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು ಎಂದರು. 12 ಜನ ಪಲಾನುಭವಿಗಳು ಅರ್ಜಿ ಸಲ್ಲಿಸಿದರು.
ರಾಜು ಪುಟ್ಟಣ್ಣವರ, ಜಗದೀಶ ಕೆ, ಹಜರೆಸಾಬ್ ಮುಳಳ್ಳಿ, ಹನಮಂತಪ್ಪ ರಡ್ಡೇರ, ಜಯಶ್ರೀ ಕುಂದಗೋಳ, ಲಲಿತಾ ಹಿರೇಮಠ, ನಾಗವ್ವ ಭಿನ್ನಲ್ಲಾ ಇತರರು ಇದ್ದರು.