ವಿಜಯಪುರದಲ್ಲಿ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಸಾಹಿತಿ ಸುಭಾಸ ಯಾದವಾಡ ಮಾತನಾಡಿದರು. ವಿ.ಸಿ. ನಾಗಠಾಣ, ಡಾ. ಸೋಮಶೇಖರ ವಾಲಿ ಮತ್ತಿತರರಿದ್ದಾರೆ. 
ಜಿಲ್ಲೆ

ಮಹಾತ್ಮ ಗಾಂಧೀಜಿ ವಿಶ್ವಪ್ರೇಮಿ

ಗಿರೀಶ ಸಗರ

ವಿಜಯಪುರ: ಮಹಾತ್ಮ ಗಾಂಧಿ ಹಾಗೂ ಲಾಲ್​ ಬಹಾದೂರ್​ ಶಾಸಿ ಅವರದ್ದು ಅದ್ಭುತ ದೇಶಪ್ರೇಮ. ಗಾಂಧೀಜಿ ಕೇವಲ ದೇಶ ಪ್ರೇಮಿಯಲ್ಲ, ಅವರೊಬ್ಬ ವಿಶ್ವಪ್ರೇಮಿಯಾಗಿದ್ದರು. ಅವರ ಆದರ್ಶ ಪಾಲಿಸಿದವರು ಶಾಸಿಯವರು ಎಂದು ಸಾಹಿತಿ ಸುಭಾಸ ಯಾದವಾಡ ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಟಕದಿಂದ ಭಾನುವಾರ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್​ ಬಹಾದೂರ್​ ಶಾಸಿ ದೇಶಪ್ರೇಮ ಕುರಿತು ಅವರು ಮಾತನಾಡಿ, ಗಾಂಧೀಜಿ ಪ್ರತಿಭಾವಂತರನ್ನು ಗುರುತಿಸುವ ಮಹಾತ್ಮರಾಗಿದ್ದರು. ತಮ್ಮ ಜೀವನ ಪೂರ್ತಿ ಅವರು ಒಳಿತು ಮಾಡಿದ್ದೇ ಹೆಚ್ಚು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಗಾಂಧೀಜಿ ಮತ್ತು ಶಾಸಿಜಿ ಅವರು ಶ್ರೇಷ್ಠ ನಾಯಕರು ಎಂದರು.

ಎಸ್​.ಎ. ಪಾಟೀಲ, ಡಾ. ಸೋಮಶೇಖರ ವಾಲಿ, ಅಪ್ಪಾಸಾಹೇಬ ಕೋರಿ, ಮಲ್ಲಿಕಾರ್ಜುನ ಭೃಂಗಿಮಠ, ಬಸವರಾಜ ಇಟ್ಟಂಗಿ, ಎಂ.ಜಿ. ಯಾದವಾಡ, ಡಾ. ವಿ.ಡಿ. ಐಹೊಳ್ಳಿ, ಮಲ್ಲಿಕಾರ್ಜುನ ಅಮರನ್ನವರ, ರವೀಂದ್ರ ಬ್ಯಾಕೋಡ, ವಿಠಲ ತೇಲಿ, ಪರಸರಾಮ ಪೋಳ, ಎಂ.ಎಂ. ಹುಂಡೇಕಾರ, ಸಹದೇವ ನಾಡಗೌಡರ, ಎಂ.ಎಂ. ಅವರಾದಿ, ಜಿ.ಬಿ. ಸಾಲಕ್ಕಿ ಮತ್ತಿತರರಿದ್ದರು. ಸಂಚಾಲಕ ಸಂಗಮೇಶ ಬದಾಮಿ ನಿರ್ವಹಿಸಿದರು.