ಲೋಕಾಪುರ ಪಟ್ಟಣದ ನಾಡ ಕಾರ್ಯಾಲಯದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಮಹೇಶ ಪಾಂಡವ ಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸತೀಶ ಬೇವೂರ, ಅಪ್ಪಾಸಿ ಸೂರ್ಯವಂಶಿ, ಯಲ್ಲಪ್ಪ ಬಾರಕೇರ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಸೌಲಭ್ಯ ಸದ್ಬಳಕೆ ಆಗಲಿ - ಪಿಂಚಣಿ ಅದಾಲತ್ ಕಾರ್ಯಕ್ರಮ

Bagalkot

ಲೋಕಾಪುರ: ಸಾರ್ವಜನಿಕರು ಸರಿಯಾದ ದಾಖಲೆ ನೀಡುವ ಮೂಲಕ ಪಿಂಚಣಿ ಅದಾಲತ್‌ನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಉಪ ತಹಸೀಲ್ದಾರ್ ಮಹೇಶ ಪಾಂಡವ ಹೇಳಿದರು.

ಪಟ್ಟಣದ ನಾಡ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲೋಕಾಪುರ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ನಿರ್ಗತಿಕ ವಿಧವಾ ವೇತನ ಹೀಗೆ ವಿವಿಧ ರೀತಿಯ ಸೌಲಭ್ಯಗಳನ್ನು ಲಾನುಭವಿಗಳಿಗೆ ಶೀಘ್ರ ಹಾಗೂ ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ ಮಾಡಲಾಗುತ್ತಿದೆ ಎಂದು ಹೇಳಿದರು.

ಕಂದಾಯ ನಿರೀಕ್ಷಕ ಸತೀಶ ಬೇವೂರ, ಗ್ರಾಮ ಲೆಕ್ಕಾಧಿಕಾರಿ ಅಪ್ಪಾಸಿ ಸೂರ್ಯವಂಶಿ, ಯಲ್ಲಪ್ಪ ಬಾರಕೇರ, ಮಂಜು ಗುಣದಾಳ, ರೇಷ್ಮಾ ಜಮಾದಾರ, ಅರುಣ ಹೊಸಮನಿ, ಶಶಿಕಲಾ ಹಿರೇಮಠ, ಕಿಶೋರ ದೊಡಮನಿ ಇತರರಿದ್ದರು.