ಬಾದಾಮಿ ತಾಲೂಕಿನ ಯಂಕಂಚಿ ಮಣಿನಾಗರ ಕೆಜಿಬಿವಿ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ದಿನಬಳಕೆ ಸಾಮಗ್ರಿ ವಿತರಿಸಲಾಯಿತು. ಬಿ.ವೈ.ಕಂದಗನೂರ, ಬಸಮ್ಮ ನರಸಾಪೂರ, ಅನಿತಾ ಜಾಲಗೇರಿ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಆಗಲಿ

Vijayapura - Desk - Chinnayya Chinnayyanamath

ಬಾದಾಮಿ: ಸಕಲ ಸೌಲಭ್ಯದೊಂದಿಗೆ ಗುಣಾತ್ಮಕ ಶಿಕ್ಷಣ ಪಡೆಯುವ ತಾವು ಪುಣ್ಯವಂತರು. ಸರ್ಕಾರ ನೀಡುವ ಸೌಲಭ್ಯಗಳು ಅಗತ್ಯಕ್ಕೆ ತಕ್ಕಂತೆ ಉಪಯೋಗವಾಗಲಿ ಎಂದು ಶಿಕ್ಷಣ ಸಂಯೋಜಕ ಹನಮಂತರಾಜು ಹೇಳಿದರು.

ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ (ಕೆಜಿಬಿವಿ) ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ದಿನಬಳಕೆ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

ಸರ್ಕಾರ ಕೊಬ್ಬರಿ ಎಣ್ಣೆ, ಬಾಚಣಿಗೆ, ಬಟ್ಟೆ ಸೋಪ್, ಸ್ನಾನದ ಸೋಪ್, ಪೌಡರ್, ಶಾಂಪೂ, ಟೂಥ್ ಪೇಸ್ಟ್, ಬ್ರಶ್, ಕೇಸರಿ ಬಿಳಿ ರಿಬ್ಬನ್, ಬಿಂದಿ ಹಾಗೂ ನೆಲ್ಕಟರ್ ವಿತರಣೆ ಮಾಡಲಾಗಿದೆ. ಇಂತಹ ಉತ್ತಮ ರೀತಿಯ ಎಲ್ಲ ದಿನಬಳಕೆ ಸಾಮಗ್ರಿ ಪಡೆಯುವ ತಾವು ನಿಜವಾಗಿಯೂ ಪುಣ್ಯವಂತರು. ಊಟ-ವಸತಿ, ಪಠ್ಯ ಪುಸ್ತಕ, ವೈದ್ಯಕೀಯ ಸೌಲಭ್ಯ, ದಿನಬಳಕೆ ಸಾಮಗ್ರಿ ಪೂರೈಕೆ, ಸಮವಸ್ತ್ರ, ಹಾಸಿಗೆ-ಹೊದಿಕೆ, ಶಿಷ್ಯವೇತನ, ಕ್ರೀಡಾ, ವಾಚನಾಲಯ ಇತ್ಯಾದಿಗಳನ್ನು ಒದಗಿಸಿ ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದಲ್ಲಿರುವ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡುವ ಏಕೈಕ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ ಎಂದರು.

ದೈಹಿಕ ಶಿಕ್ಷಣ ಪರಿವೀಕ್ಷಕಿ ಬಿ.ವೈ.ಕಂದಗನೂರ, ಪ್ರೌಢಶಾಲೆ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎ.ಹದ್ಲಿ, ಶಾಲೆ ಮುಖ್ಯಶಿಕ್ಷಕಿ ಬಸಮ್ಮ ನರಸಾಪೂರ ಮಾತನಾಡಿದರು. ಸಹಶಿಕ್ಷಕಿ ಅನಿತಾ ಜಾಲಗೇರಿ ಇತರರಿದ್ದರು.