ಹಗರಿಬೊಮ್ಮನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಉಚಿತವಾಗಿ ನೀರು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಸದಸ್ಯರಾದ ದೀಪಕ್ ಕಠಾರೆ, ಗಣೇಶ, ನಾಮ ನಿರ್ದೇಶಿತ ಸದಸ್ಯರಾದ ಮಂಜುನಾಥ, ಕೃಷ್ಣಪ್ಪ, ಪ್ರಮುಖರಾದ ಚಿಂತ್ರಪಳ್ಳಿ ದೇವೇಂದ್ರ, ಸಿಕಂದರ್, ಅಂಬಳಿ ರವಿಂದ್ರ, ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ಇಂಜಿನಿಯರ್ ಹುಸೇನ್ ಬಾಷಾ ಇದ್ದರು. 
ಜಿಲ್ಲೆ

ಉಚಿತ ಶುದ್ಧ ನೀರು ಸದ್ಬಳಕೆ ಮಾಡಿಕೊಳ್ಳಿ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಆರ್‌ಒ ಪ್ಲಾಂಟ್‌ಗಳಿಂದ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ತಿಳಿಸಿದರು.

ಪಟ್ಟಣದ ಅರಳಿಹಳ್ಳಿ ಕುರದಗಡ್ಡೆ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕದಿಂದ ಮೇ 31ರವರೆಗೆ ಉಚಿತವಾಗಿ ನೀರು ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಬೇಸಿಗೆಯಲ್ಲಿ ನೀರಿನ ಮಹತ್ವ ತಿಳಿಯುತ್ತದೆ. ಶುದ್ಧ ಕುಡಿಯುವ ನೀರನ್ನು ಕುಡಿಯಲು ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಬೇಸಿಗೆಯ ಎರಡು ತಿಂಗಳು ಉಚಿತವಾಗಿ ನೀರು ನೀಡಬೇಕು ಎಂದು ತೀರ್ಮಾನಿಸಿದಾಗ ಪುರಸಭೆಯ ಎಲ್ಲ ವಾರ್ಡ್‌ಗಳ ಸದಸ್ಯರು ಒಪ್ಪಿಗೆ ನೀಡಿದರು. ಆದ್ದರಿಂದ ಉಚಿತವಾಗಿ ಸಿಗುವ ನೀರು ಮನೆಗಳಿಗೆ ಮಾತ್ರ ಪೂರೈಕೆ ಮಾಡಿಕೊಳ್ಳಬೇಕು. ಯಾವುದೇ ಸಭೆ, ಸಮಾರಂಭ ಅಥವಾ ಹೋಟೆಲ್‌ಗಳಿಗೆ ಕೊಡಲಾಗದು. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು.