ಕುಡಚಿ: ತಾಯಿಂದಿರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ಸಾಹಿತಿ ವಿದ್ಯಾ ರೆಡ್ಡಿ ಹೇಳಿದರು.
ಹಾಲಶಿರಗೂರ ಗ್ರಾಮದಲ್ಲಿ 25ನೇ ವರ್ಷದ ಶ್ರೀ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಮಕ್ಕಳು ತಾಯಿಯಲ್ಲಿ ದೇವರನ್ನು ಕಾಣಬೇಕು ಎಂದರು.
ಉಮರಾಣಿ ಜ್ಞಾನಯೋಗ ಆಶ್ರಮದ ಮಾತೋಶ್ರಿ ಅಕ್ಕಮಹಾದೇವಿ ಮಾತನಾಡಿದರು. ಮಹಿಳೆಯರಿಗೆ ಅರಿಶಿಣ ಕುಂಕುಮ ನೀಡಿ, ಉಡಿ ತುಂಬಲಾಯಿತು. ಕಲಾವಿದ ಬಾಬುರಾವ ನಡೋನಿ, ಆಶಾರಾಣಿ ನಡೋನಿ ಇತರರಿದ್ದರು.