ಜಿಲ್ಲೆ

ಮಕ್ಕಳಿಗೆ ಮೌಲ್ಯಗಳ ಅರಿವು ಮೂಡಿಸಿ

ಬಸವರಾಜ ವೀರಪ್ಪ ಗರಗ

ಕಲಘಟಗಿ: ಇಂದಿನ ಯುವ ಪೀಳಿಗೆಯು ಉದ್ಯೋಗ ಸಂಪಾದನೆಯೊಂದೇ ಪರಮೋಚ್ಛ ಗುರಿ ಎಂದು ಭಾವಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಬಾಣಸಗೇರಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಅಜೀಟ್ ಅಹ್ಮದ್ ಹೇಳಿದರು.

ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಪಠ್ಯದೊಂದಿಗೆ ಮಕ್ಕಳಿಗೆ ಮೌಲ್ಯಗಳ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ನೈತಿಕ ಮೌಲ್ಯರಹಿತ ಶಿಕ್ಷಣ ದೇಶ ಮತ್ತು ಸಮಾಜಕ್ಕೆ ಮಾರಕವಾಗಬಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲೆಯ ಪ್ರಾಚಾರ್ಯ ಆಸೀಫ್ ಅಲಿ ನದಾಫ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸದಾ ಗುರುವಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಸುನೀತಾ ವಾಲಿಶೆಟ್ಟರ್, ಐ.ಎಂ. ಕಿಲ್ಲೇದಾರ, ತೌಫೀನ್ ಜಿರಲಭಾವಿ, ಸೀಮಾ ಕುಲಕರ್ಣಿ, ಆಶಾ ದೊಡ್ಡಗೌಡ್ರು, ಬಸವರಾಜ ಬಡಿಗೇರ, ರೇಖಾ ಅಲಮೇಖರ, ಕೊಟ್ರೇಶ ನಡುವಿನಮನಿ, ಸಾವಿತ್ರಿ ಯಲಿಗಾರ, ಗೀತಾ ಶಿರಗುಪ್ಪಿ, ಸೌಮ್ಯಾ ಜಿನ್ನಮ್ಮನವರ, ಪರಶುರಾಮ ಮುಳಗುಂದ, ಇತರರಿದ್ದರು.