ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಕೈ ತೊಳೆಯುವ ಕುರಿತು ಜಾಗೃತಿ ಮೂಡಿಸಲಾಯಿತು. ಕ್ಷಕ ಸಂತೋಷ ಬಂಡೆ, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಹುಣಶ್ಯಾಳ, ಸುಶೀಲಾ ಸಮಗೊಂಡ, ರಾಜೇಶ್ವರಿ ಸಮಗೊಂಡ, ಗೌರಕ್ಕ ಹಂಡಿ ಮತ್ತಿತರರಿದ್ದರು.  
ಜಿಲ್ಲೆ

ವಿಜಯಪುರ : ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಲಿ

ವಿಜಯಪುರ : ಇಂದಿನ ಸಮಾಜದಲ್ಲಿ ಸಾಬೂನು ಬಳಸಿ ಕೈ ತೊಳೆಯುವ ಉಪಯೋಗಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯಿತಿ, ಶಿಶು ಅಭಿವೃದ್ಧಿ ಯೋಜನೆ(ಗ್ರಾಮೀಣ) ಅವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನ, ಬಾಣಂತಿಯರಿಗೆ ಪೌಷ್ಟಿಕ ಶಿಬಿರ ಹಾಗೂ ವಿಶ್ವ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೈ ತೊಳೆಯದೆ ಆಹಾರ ಸೇವನೆಯಿಂದ ಅನೇಕ ರೋಗಗಳು ಬರುತ್ತವೆ. ಶೇ.15 ಪುರುಷರು, ಶೇ.7 ಮಹಿಳೆಯರು ಶೌಚಗೃಹ ಬಳಸಿದ ನಂತರ ಸೋಪ್ ಬಳಸಿ ಕೈ ತೊಳೆದುಕೊಳ್ಳುವುದಿಲ್ಲ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಸೋಪ್ ಬಳಸಿ ಕೈ ತೊಳೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಅಂಗನವಾಡಿ ಮೇಲ್ವಿಚಾರಕಿ ಸುರೇಖಾ ತೇಲಿ ಮಾತನಾಡಿ, ಗರ್ಭಿಣಿ, ಬಾಣಂತಿ, ಕಿಶೋರಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಯೋಜನೆ ರೂಪಿಸಿ, ಅಪೌಷ್ಟಿಕತೆ ನಿವಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಇದನ್ನು ಮಹಿಳೆಯರು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅಂಗನವಾಡಿ ಮಕ್ಕಳ ತಾಯಂದಿರರಿಗೆ ಕೈ ತೊಳೆಯುವ ವಿಧಾನಗಳ ಬಗ್ಗೆ ಪ್ರಾತಕ್ಷಿಕೆ ಮಾಡಿ ತೋರಿಸಿ, ಸ್ವಚ್ಚತೆಯ ಅರಿವು ಮೂಡಿಸಲಾಯಿತು.

ಗ್ರಾಪಂ ಸದಸ್ಯ ರಾಮನಿಂಗ ಸಮಗೊಂಡ, ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಸಮಗೊಂಡ, ರಾಜೇಶ್ವರಿ ಸಮಗೊಂಡ, ಗೌರಕ್ಕ ಹಂಡಿ, ಭವರಮ್ಮ ಅರ್ಜುಣಗಿ, ವಿಜಯಲಕ್ಷ್ಮಿ ಹಂಡಿ, ಸುಜಾತಾ ಲೋಣಿ, ಶಾಂತಾ ಮಠಪತಿ, ಮಮ್ತಾಜ್ ಗುಣಕಿ, ಶಿಲ್ಪಾ ಪತ್ರಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.