ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯ ಹರಾಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವ ಮಳಿಗೆಗಳನ್ನು ಪರಭಾರೆ ಮಾಡಲು ಅವಕಾಶ ಮಾಡಿಕೊಡದಂತೆ ನಿಯಮ ರೂಪಿಸಿಬೇಕೆಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಪಂಚಾಯಿತಿ ಅರೋಗ್ಯ ನಿರೀಕ್ಷಕರ ಮೂಲಕ ಆಡಳಿತಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಜಯೇಂದ್ರ, ಚಂದ್ರಶೇಖರ್, ಕೀರ್ತಿ, ದಿನೇಶ್ ಇದ್ದರು. 
ಜಿಲ್ಲೆ

ಮಳಿಗೆ ಪರಭಾರೆ ಮಾಡದಂತೆ ನಿಯಮ ರೂಪಿಸಿ

ನಾಗೇಶ ಎಸ್

ಸೋಮವಾರಪೇಟೆ: ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯ ಹರಾಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವ ಮಳಿಗೆಗಳನ್ನು ಪರಭಾರೆ ಮಾಡದಂತೆ ನಿಯಮ ರೂಪಿಸಿಬೇಕೆಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಇ.ಜಯೇಂದ್ರ ಒತ್ತಾಯಿಸಿದ್ದಾರೆ.

ಎಸ್‌ಸಿ, ಎಸ್‌ಟಿಗೆ 9ಮಳಿಗೆಗಳನ್ನು ಮೀಸಲಿಡಲಾಗಿದೆ. ಜ.3ರಂದು ಮಳಿಗೆ ಹರಾಜು ನಡೆಯಲಿದ್ದು, ಬಿಡ್ ಮಾಡಿದವರು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು. ಬಿಡ್ ಮಾಡಿದವರೆ ಮಳಿಗೆಗಳನ್ನು ವ್ಯಾಪಾರ ವ್ಯವಹಾರಕ್ಕೆ ಬಳಸಿಕೊಳ್ಳಬೇಕು. ಈ ಬಗ್ಗೆ ನಿಯಮ ರೂಪಿಸಿ ಅದರ ಅನ್ವಯ ಹರಾಜು ನಡೆಯಬೇಕೆಂದು ಮನವಿ ಪತ್ರವನ್ನು ಆರೋಗ್ಯ ನಿರೀಕ್ಷಕ ಜಾಸ್ಮಿನ್ ಖಾನ್ ಅವರು ಮೂಲಕ ಆಡಳಿತಾಧಿಕಾರಿಗೆ ಮಂಗಳವಾರ ಸಲ್ಲಿಸಿದರು.
ಘಟಕದ ಕಾರ್ಯದರ್ಶಿ ಸಿ.ಈ.ವೆಂಕಟೇಶ್, ಸೋಮವಾರಪೇಟೆ ನಗರ ಅಧ್ಯಕ್ಷ ಎಚ್.ಎಸ್.ಚಂದ್ರಶೇಖರ್, ಪದಾಧಿಕಾರಿಗಳಾದ ಎಚ್.ಜೆ.ಕೀರ್ತಿ, ದಿನೇಶ್, ಬೋಪಯ್ಯ ಇದ್ದರು.