ಹೊಸಪೇಟೆ ಖಾಸಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಕ್ಷೇತ್ರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂಲ ಸೌಕರ್ಯ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಿದರು. ಪ್ರಭಾರ ಬಿಇಒ ಶೇಖರಪ್ಪ ಹರಪೇಟೆ, ಶಿಕ್ಷಣ ಸಂಯೋಜಕ ಶಿವರಾಮಪ್ಪ, ಬಿಆರ್‌ಪಿ ಹನುಮೇಶ, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಲ್ಲಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರಭದ್ರೇಶ ಇತರರಿದ್ದರು. 
ಜಿಲ್ಲೆ

ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ

ಗಾಯತ್ರಿ ಮಾಲಿಪಾಟೀಲ್

ಹೊಸಪೇಟೆ: ಶಾಲೆ ಸಮಸ್ಯೆಗಳನ್ನು ಮುಖ್ಯಶಿಕ್ಷಕರಿಂದ ತಿಳಿದು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದ ಖಾಸಗಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜಯನಗರ ಕ್ಷೇತ್ರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂಲ ಸೌಕರ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮುಖ್ಯಶಿಕ್ಷಕರಿಂದ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ಯೋಜನೆಗಳಿಗೆ ಬೇಕಿರುವ ಸಲಹೆ ತಿಳಿಯಬೇಕಿದೆ. ಈ ಬಾರಿ ಜಿಲ್ಲೆಯಲ್ಲಿ ಫಲಿತಾಂಶ 27ರಿಂದ 17ನೇ ಸ್ಥಾನಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಸ್ಮಾರ್ಟ್ ಕ್ಲಾಸ್, ಕೊಠಡಿಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 23 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಬಾರಿ 10 ರಿಂದ 15 ಕೋಟಿ ರೂ. ನೀಡಲಾಗುವುದು ಎಂದರು.

ಪ್ರಭಾರ ಬಿಇಒ ಶೇಖರಪ್ಪ ಹರಪೇಟೆ ಮಾತನಾಡಿ, ತಾಲೂಕಿನಲ್ಲಿ 123 ಶಾಲೆಗಳಿವೆ. ಶೌಚಗೃಹ, ಮೂಲಸೌಕರ್ಯ ಇತರೆ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು ಸಹಕರಿಸಲಿದ್ದಾರೆ. 365 ಕೊಠಡಿ ರಿಪೇರಿ ಹಾಗೂ 93 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಶಾಲೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. 9 ಹೊಸ ಇಸಿಸಿಇ ಶಾಲೆಗಳ ಆರಂಭಕ್ಕೆ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.