ಕಂಪ್ಲಿ: ಆರ್ಯವೈಶ್ಯ ಸಮಾಜ ವ್ಯಾಪಾರದ ಜತೆಗೆ ವಿವಿಧ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲಿ ಎಂದು ಶಿವಮೊಗ್ಗದ ಎಂಎಲ್ಸಿ ಡಿ.ಎಸ್.ಅರುಣ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದ ಕಚೇರಿ ಮತ್ತು ಸಂಗ್ರಹ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಸಮುದಾಯದ ಯುವಜನತೆ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಬೇಕು.
ಸರ್ಕಾರದ ಯೋಜನೆಗಳ ಅರಿತು ಸದ್ಬಳಕೆ ಮಾಡಿಕೊಳ್ಳಬೇಕು. ಬೇರೆ ನಿಗಮಗಳಿಗೆ ಹೋಲಿಸಿದಲ್ಲಿ ಆರ್ಯವೈಶ್ಯ ನಿಗಮದ ಫಲಾನುಭವಿಗಳು ಸಾಲದ ಕಂತು ಮರುಪಾವತಿಸುವಲ್ಲಿ ಮುಂಚೂಣಿಯಲ್ಲಿರುವುದು ಪ್ರಗತಿಯ ಸಂಕೇತವಾಗಿದೆ ಎಂದರು.
ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಡಿ.ವಿ.ಸುಬ್ಬಾರಾವ್ ಮಾತನಾಡಿ, ಆರ್ಯವೈಶ್ಯ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ಸರ್ಕಾರ ರೂಪಿಸಲಿ ಎಂದರು.
ಧರ್ಮಕರ್ತ ಯಣ್ಣಿ ಚಂದ್ರಮೋಹನಶ್ರೇಷ್ಠಿ, ವಾಸವಿ ಕಲ್ಯಾಣಮಂಟಪದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಬಿ.ಕೋಟೇಶ್ವರರಾವ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ರಮಾ ವೆಂಕಟರಮಣ, ವಾಸವಿ ಯುವಜನ ಸಂಘದ ಅಧ್ಯಕ್ಷ ಗುರುಕೃಷ್ಣ ಧನಪಾಲ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಶ್ರೀಧರ ಶ್ರೇಷ್ಠಿ, ಪದಾಧಿಕಾರಿಗಳಾದ ಜಿ.ರಾಜಾರಾವ್, ಡಿ.ವಿ.ಸತ್ಯನಾರಾಯಣ ಇತರರಿದ್ದರು.
ಇದನ್ನೂ ಓದಿ: ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಶೇ.100 ಸಾಧನೆ