ಜಿಲ್ಲೆ

ಪೆರ್ಡೂರಿನಲ್ಲಿ ಮಕರ ಸಂಕ್ರಮಣ ಪೂಜೆ

ಇಂದಿರಾ ಎನ್ ಕೆ

ಹೆಬ್ರಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ ಮಂಗಳವಾರ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಸದಸ್ಯರಾದ ಪಿ.ಕೃಷ್ಣ ಅಡಿಗ, ರಾಮ ಕುಲಾಲ್ ಪಕ್ಕಾಲ್, ದಿನೇಶ್ ಪೂಜಾರಿ ಗರಡಿಮನೆ, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಸಂತೆಕಟ್ಟೆ, ರಾಮದಾಸ ಶಾಂತಾ ಆರ್.ಶೆಟ್ಟಿ ವಡ್ಡಮೇಶ್ವರ, ಲಲಿತಾಂಬಾ ಎ.ಗೌಡ ಜೋಗಿಬೆಟ್ಟು, ಕಾರ್ಯನಿರ್ವಹಣಾಧಿಕಾರಿ ಕಾಪು ತಹಸೀಲ್ದಾರ್ ಪ್ರತಿಭಾ ಆರ್., ಗೌರವ ಕಾನೂನು ಸಲಹೆಗಾರ ವಿಶ್ವಾಸ ಶೆಟ್ಟಿ ಉಪಸ್ಥಿತರಿದ್ದರು.