ಹುಬ್ಬಳ್ಳಿ: ಸಮಾಜ ಸೇವಕ, ರಾಜ್ಯ ಸರ್ಕಾರದ ಸೇವಾ ಪ್ರಶಸ್ತಿ ಪಡೆದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಇವರನ್ನು ಇಲ್ಲಿಯ ಮೂರುಸಾವಿರ ಮಠದಲ್ಲಿ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಪುರಸ್ಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ನಾಡಿಗೆ ಜಿತೇಂದ್ರ ಮಜೇಥಿಯಾ ಅವರು ಸಲ್ಲಿಸಿದ ಸೇವೆ ಅರ್ಥರ್ಪೂಣವಾಗಿದೆ. ಬಡವರಿಗೆ, ಪ್ರತಿಭಾವಂತರಿಗೆ ನೆರವು ನೀಡುತ್ತ ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ ಕರ್ನಾಟಕ ಸರ್ಕಾರವು ಪ್ರಶಸ್ತಿ ನೀಡಿರುವುದು ಸ್ತುತ್ಯರ್ಹವಾಗಿದೆ ಎಂದು ಹೇಳಿದರು.
ಪುರಸ್ಕಾರ ಸ್ವೀಕರಿಸಿದ ಜಿತೇಂದ್ರ ಮಜೇಥಿಯಾ ಅವರು ಮಾತನಾಡಿ, ಪ್ರಶಸ್ತಿಯಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಇನ್ನೂ ಹೆಚ್ಚು ಜನರ ಸೇವೆ ಮಾಡಲು ಸ್ಪೂರ್ತಿ ಸಿಕ್ಕಿದೆ ಎಂದರು.
ಅಮರೇಶ ಹಿಪ್ಪರಗಿ, ಸೋನಲ್ ಮೆಹರವಾಡೆ, ಮಹೇಶ ಹಚಡದ, ರೋಹನ ಗೊಂದಕರ ಉಪಸ್ಥಿತರಿದ್ದರು.