ಜಿಲ್ಲೆ

ಮಜೇಥಿಯಾ ಫೌಂಡೇಷನ್ ನಿಂದ ಲ್ಯಾಪ್ ಟಾಪ್ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಮಜೇಥಿಯಾ ಫೌಂಡೇಷನ್ ವತಿಯಿಂದ ವೈದ್ಯಕಿಯ ಹಾಗೂ ಸಂಶೋಧನಾ ವಿದ್ಯಾಥಿರ್ಗಳಿಗೆ ಲ್ಯಾಪ್ಟಾಪ್, ದಿವ್ಯಾಂಗರಿಗೆ ಗಾಲಿ ರ್ಕುಚಿ, ಊರುಗೋಲುಗಳನ್ನು ನಗರದಲ್ಲಿ ಶನಿವಾರ ವಿತರಣೆ ಮಾಡಲಾಯಿತು.

ಇಲ್ಲಿಯ ಮಜೇಥಿಯಾ ಫೌಂಡೇಷನ್ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ
ಅತಿಥಿಯಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಅವರು ಲಾನುಭವಿಗಳಿಗೆ ಲ್ಯಾಪ್ಟಾಪ್ ವಿತರಿಸಿದರು.

ಒಬ್ಬ ವ್ಯಕ್ತಿ ತನ್ನ ಕಾಯಕದಲ್ಲಿ ಉನ್ನತ ಶಿಖರ ಏರಿ ಶ್ರೀಮಂತನಾದಾಗ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು, ಸಹಾಯ ಸಹಕಾರ ನೀಡುವ ಗುಣ ಕೆಲವೇ ಜನರಿಗೆ ಇರುತ್ತದೆ. ಅಂತಹ ವ್ಯಕ್ತಿ ಜೀತೇಂದ್ರ ಮಜೇಥಿಯಾ ಆಗಿದ್ದಾರೆ. ಅವರು ಯಾವುದೇ ವ್ಯಕ್ತಿ ತೊಂದರೆಗೊಳಗಾದರೆ ಸಹಾನುಭೂತಿ ತೋರಿಸದೆ ಸಹಾಯಕ್ಕೆ ಧಾವಿಸುತ್ತಾರೆ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.

ಬಡ ವಿದ್ಯಾಥಿರ್ಗಳಿಗೆ, ಅಂಗವಿಕಲರಿಗೆ ಸದಾ ಸಹಾಯ ಹಸ್ತ ಚಾಚಿ ಅವರ ಬದುಕಿಗೆ ಸನ್ಮಾರ್ಗ ಒದಗಿಸುತ್ತಿರುವುದು ಫೌಂಡೇಷನ್ನ ನಿಜವಾದ ಸೇವೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್ ನಿರ್ದೇಶಕ ಕಶ್ಯಪ್ ಮಜೇಥಿಯಾ ಮಾತನಾಡಿ, ವಿದ್ಯಾಥಿರ್ಗಳು ಗುರುವಿನ ಮಂತ್ರವನ್ನು ಸದಾ ಪಾಲಿಸಬೇಕು. ಅಂದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ವಿದ್ಯಾಥಿರ್ಗಳಿಗೆ ಸಮಯ ಪ್ರಜ್ಞೆ, ನಿಷ್ಠೆ, ಒಳ್ಳೆ ವಿಚಾರಗಳು ಅಗತ್ಯ ಎಂದರು.

ಫೌಂಡೇಷನ್ನ ಶ್ರೀಧರ ಜೋಶಿ, ಎಚ್.ಆರ್. ಪ್ರಹ್ಲಾದ ರಾವ್, ಕಾರ್ಯದಶಿರ್ ಅಮರೇಶ ಹಿಪ್ಪರಗಿ, ಅಮೃತಬಾಯ್ ಪಟೇಲ್, ದಯಾ ಪಟೇಲ್, ರೇಷ್ಮಾ ತಡಕೊಡ, ಸುಭಾಸಸಿಂಗ್ ಜಮಾದಾರ, ರೀತು ಬೆಟಗೇರಿ, ಮಂಜುನಾಥ ಭಟ್, ಶ್ವೇತಾ ಜೈನ್ ಉಪಸ್ಥಿತರಿದ್ದರು.

ಮೋಹನ ಬಾಳೆಹೊಸೂರ ಲ್ಯಾಪ್ಟಾಪ್, ಗಾಲಿ ರ್ಕುಚಿಗಳ ಬಳಕೆ ಪ್ರಾತ್ಯಕ್ಷಿಕೆ ನೀಡಿದರು.
ಸುನೀಲಕುಮಾರ ಕುಕ್ಕನೂರ ಸ್ವಾಗತಿಸಿದರು. ರೋಹನ ಗೋಂದಕರ ವಂದಿಸಿದರು.