ಹುಬ್ಬಳ್ಳಿ: ಆರ್ಥಿಕವಾಗಿ ಸಂಕಷ್ಟಕ್ಕೀಡಾದವರ ನೋವು ನಿವಾರಿಸಿ, ಮಾನವೀಯತೆ ಮೆರೆಯುತ್ತಿರುವ ಮಜೇಥಿಯಾ ಫೌಂಡೇಷನ್ ಸಾಮಾಜಿಕ ಸೇವೆ ಅರ್ಥಪೂರ್ಣವಾಗಿದೆ ಎಂದು ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಶ್ಲಾಘಿಸಿದರು.
ಇಲ್ಲಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಮಜೇಥಿಯಾ ಫೌಂಡೇಷನ್‌ನ ಫಿಜಿಯೋಥೆರಪಿ ಕೇಂದ್ರದ ಮೊದಲನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಡ ಕುಟುಂಬದವರು, ವೃದ್ಧರು, ಅಂಗವಿಕಲರರು, ಗರ್ಭಿಣಿಯರು ಫಿಜಿಯೋಥೆರಪಿ ಕೇಂದ್ರದಿಂದ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಫೌಂಡೇಷನ್ ಅಧ್ಯಕ್ಷ ಡಾ. ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಫೌಂಡೇಷನ್‌ವತಿಯಿಂದ ಇನ್ನಷ್ಟು ಸಮಾಜ ಸೇವೆ ಮಾಡುವ ಸಂಕಲ್ಪ ತೊಟ್ಟಿದ್ದೇವೆ. ಜನರ ಸಂಕಷ್ಟಕ್ಕೆ ಸ್ಪಂದಿಸುವಂಥ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯೋಚಿಸಿದ್ದೇವೆ ಎಂದರು.
ಡಾ.ಕೆ. ರಮೇಶ ಬಾಬು, ಡಾ.ವಿ.ಬಿ. ನಿಟಾಲಿ, ಡಾ. ನಾಗರಾಜ ಸಾನು, ಎಚ್. ಪ್ರಹ್ಲಾದರಾವ್, ತರುಣ್ ಮಜೇಥಿಯಾ, ಅಮರೇಶ ಹಿಪ್ಪರಗಿ, ಡಾ. ಶಿವಾನಿ ಪೋತದಾರ, ನವೀನ ಮಾಲಿನ, ರೋಹನ ಗೋಟದಕರ, ಐಶ್ವರ್ಯಾ ಕುಬಸದ ಮಾತನಾಡಿದರು.
ಸಿಇಒ ಡಾ. ಸುನೀಲಕುಮಾರ ಕುಕನೂರ ಸ್ವಾಗತಿಸಿದರು. ರೂಪಾ ಮಾಳವದೆ ವಂದಿಸಿದರು.