ಜಿಲ್ಲೆ

ಮೆಜೆಸ್ಟಿಕ್​ ಬಸ್​ನಿಲ್ದಾಣದ ನಟೋರಿಯಸ್ ಗ್ಯಾಂಗ್ ಪೊಲೀಸ್ ಬಲೆಗೆ

shastrimath

ಬೆಂಗಳೂರು: ಮೆಜೆಸ್ಟಿಕ್​ನಲ್ಲಿ ಕೆಎಸ್ಆರ್​ಟಿಸಿ ಬಸ್​ ನಿಲ್ದಾಣದಲ್ಲಿರುವ ಪ್ರಯಾಣಿಕರನ್ನೆ ಟಾರ್ಗೆಟ್ ಮಾಡಿ ದರೋಡೆ, ಸುಲಿಗೆ, ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಫ್ರೋಜ್​, ಲೋಹಿತ್​, ರವಿ, ಅಕ್ಷಯತ್ ಎಂದು ಗುರುತಿಸಲಾಗಿದೆ.

ಉಪ್ಪಾರಪೇಟೆ, ಕಾಟನ್​ಪೇಟೆ, ವಿಜಯನಗರ, ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ಕಾರ್ಯಾಚರಿಸುತ್ತಿತ್ತು. ಎರಡು ದಿನಗಳ ಹಿಂದೆ ಇದೇ ಗ್ಯಾಂಗ್ ಹಾಸನದಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕ ದರೋಡೆ ಮಾಡಿತ್ತು.

ಬಂಧಿತರಿಂದ ಪೊಲೀಸರು 50 ಗ್ರಾಂ ಚಿನ್ನ, 50,000 ರೂಪಾಯಿ ನಗದು ವಶಪಡಿಸಿದ್ದಾರೆ. ಅಲ್ಲದೆ, 16.60 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆದಿದೆ. (ದಿಗ್ವಿಜಯ ನ್ಯೂಸ್)