ಜಿಲ್ಲೆ

ಮೆಕ್ಕೆಜೋಳ ಪೂರೈಕೆ ಹೆಸರಿನಲ್ಲಿ 56 ಲಕ್ಷ ರೂ. ವಂಚನೆ

ರಾಣೆಬೆನ್ನೂರ: ಮೆಕ್ಕೆಜೋಳ ಪೂರೈಕೆ ಮಾಡುವ ಹೆಸರಿನಲ್ಲಿ 56 ಲಕ್ಷ ರೂ. ವಂಚಿಸಿರುವ ಹಾಗೂ ಆನ್​ಲೈನ್​ ಮೂಲಕ ಮೆಕ್ಕೆಜೋಳ ಪೂರೈಕೆ ಮಾಡಿದಂತೆ ದಾಖಲಾತಿ ಸೃಷ್ಟಿಸಿರುವ ಕುರಿತು ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ ತಾಲೂಕಿನ ಹಾಲಗಿ ಮರೋಳ ಗ್ರಾಮದ ಅನ್ನಪೂಣೇಶ್ವರಿ ಟ್ರೆಡರ್ಸ್​ ಮಾಲೀಕ ಕರಬಸಪ್ಪ ರಿತ್ತಿ ಎಂಬುವರ ವಿರುದ್ಧ ದೂರು ದಾಖಲಾಗಿರುವುದು.

ಈತನ ವಿರುದ್ಧ ನಗರದ ವ್ಯಾಪಾರಿ ಬಸವರಾಜ ಚನ್ನಬಸಪ್ಪ ಗೌಡಶಿವಣ್ಣನವರ (48) ಎಂಬುವರು ದೂರು ದಾಖಲಿಸಿದ್ದಾರೆ.

ಆರೋಪಿಯು ಮೆಕ್ಕೆಜೋಳ ಪೂರೈಕೆ ಮಾಡುವುದಾಗಿ ಹೇಳಿ 56 ಲಕ್ಷ ರೂ.ಅನ್ನು ಪಡೆದಿದ್ದಾನೆ. ಆದರೆ, ಯಾವುದೆ ರೀತಿಯಲ್ಲಿ ಮೆಕ್ಕೆಜೋಳ ನೀಡದೆ ಆನ್​ಲೈನ್​ ಮೂಲಕ 2812 ಕ್ವಿಂಟಾಲ್​ ಮೆಕ್ಕೆಜೋಳ ಪೂರೈಯಿಸಿದ ರೀತಿಯಲ್ಲಿ ಬಿಲ್​ಅನ್ನು ಸೃಷ್ಟಿ ಮಾಡಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.