ಉಜ್ಜಿನಿ: ರಾಣೆಬೆನ್ನೂರಿನಿಂದ ಬಿತ್ತನೆ ಬೀಜ ತಂದು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಮೊಳಕೆಯೊಡೆಯದಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಸಮೀಪದ ಗಾಣಗಟ್ಟೆಯಲ್ಲಿ ನಡೆದಿದೆ.
ಇದನ್ನೂ ಓದಿ:ಕಳಪೆ ಬಿತ್ತನೆ ಬೀಜ ನೀಡಿದ ಕಂಪನಿ ಮೇಲೆ ಕ್ರಮವಾಗಲಿ
ಈ ಬಾರಿ ಮುಂಗಾರು ಮಳೆ ಉತ್ತವಾಗಿದ್ದರಿಂದ ಗಾಣಗಟ್ಟೆ ಗ್ರಾಮದ 25ಕ್ಕೂ ಹೆಚ್ಚು ರೈತರು ಮೆಕ್ಕೆ ಜೋಳ ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕಳಪೆ ಬೀಜ ಬಿತ್ತಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಣೆಬೆನ್ನೂರಿನ ಶಿವಂ ಸೀಡ್ಸ್ ಮಾರಾಟ ಮಳಿಗೆಯಲ್ಲಿ ಬೀಜ ಖರೀದಿ ಮಾಡಿದ್ದ ಈ ರೈತರು 150ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ್ದು, ಎಲ್ಲಿಯೂ ಒಂದು ಕಾಳು ಸಹ ಮೊಳಕೆಯೊಡೆದಿಲ್ಲ. ಬೀಜ, ಗೊಬ್ಬರ, ಬಿತ್ತನೆಗೆ ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಬಿತ್ತನೆ ಮಾಡಿದ ಬೀಜ ಫಲಕೊಡದಿರುವುದು ರೈತರನ್ನು ಬಿದಿಗೆ ಬರುವಂತೆ ಮಾಡಿದೆ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಂಡು ತಮ್ಮ ನೆರವಿಗೆ ಬರಬೇಕು ಎಂದು ರೈತರಾದ ಹನುಮಂತಪ್ಪ , ಎನ್.ಮಹಾಂತೇಶ, ಮಾರುತಿ, ಪ್ರವೀಣ, ವೆಂಕಟೇಶ, ರಾಜಶೇಖರ, ಎಸ್.ಮಾಯಪ್ಪ, ಬಸವರಾಜ, ಆನಂದಪ್ಪ, ಬುಡ್ರಿ ಮಹೇಶ, ರಾಜಣ್ಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.