ಬಂಕಾಪುರ: ಜಮೀನಿನಲ್ಲಿ ಮೆಕ್ಕೆಜೋಳ ಮುರಿಯುತ್ತಿದ್ದ ಸಮಯದಲ್ಲಿ ರೈತರೊಬ್ಬರು ಹಾವು ಕಚ್ಚಿ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಬಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮಂಜುನಾಥ ಯಲ್ಲಪ್ಪ ಬೈರಿಯವರ (47) ಮೃತ ರೈತ.
ಇವರು ಜಮೀನಿನಲ್ಲಿ ಮೆಕ್ಕೆಜೋಳ ಮುರಿಯುತ್ತಿದ್ದ ಸಮಯದಲ್ಲಿ ಹಾವು ಕಚ್ಚಿದೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.