ಹೊಳಲ್ಕೆರೆ: ಇದೇ ವಾರದಲ್ಲಿ ಮಳೆಯಾದರೆ ಸ್ವಲ್ಪ ಬೆಳೆ ಉಳಿಯುವ ಕುರಿತು ನಿರೀಕ್ಷಿಸಬಹುದು. ಇಲ್ಲದಿದ್ದರೆ ರೈತರು ಬರಗಾಲಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಕೃಷಿ ವಿಜ್ಞಾನಿ ಡಾ.ಓಂಕಾರಪ್ಪ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಜಾಜೂರು ಗ್ರಾಮಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಪರಿಶೀಲನೆ ಮಾಡಿ ಮಾತನಾಡಿ, ಮತ್ತೊಂದು ಕಡೆ ರೈತರು ಒಣಗುತ್ತಿರುವ ಮೆಕ್ಕೆಜೋಳ ಬೆಳೆ ನಾಶಪಡಿಸಿ ರಾಗಿ ಬಿತ್ತನೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಬಿತ್ತನೆ ಮಾಡುವಷ್ಟು ಭೂಮಿ ಹಸಿ ಇಲ್ಲದ ಕಾರಣ ಅದನ್ನು ಬಿತ್ತನೆ ಮಾಡುವುದೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ ಎಂದರು.
ವಿಜ್ಞಾನಿ ಡಾ.ಮಹಾಂತೇಶ್, ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್, ರೈತ ಕೆ.ವಿ.ಕಲ್ಲೇಶಪ್ಪ ಇತರರಿದ್ದರು.