ಜಿಲ್ಲೆ

ಕಡವೈ-ರತ್ನಗಿರಿ ಹಾಗೂ ಮಡಗಾಂವ್-ಕುಮಟಾ ವಿಭಾಗ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ


ಮಂಗಳೂರು: ಕಡವೈ-ರತ್ನಗಿರಿ ಹಾಗೂ ಮಡಗಾಂವ್-ಕುಮಟಾ ವಿಭಾಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡ ಕಾರಣ, ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ಅ.9ರಿಂದ 12ರ ತನಕ ವ್ಯತ್ಯಯವಾಗಲಿದೆ.


ಅ.9ರಂದು ರೈಲು ನಂ 19577 ತಿರುನಲ್ವೇಲಿ ಜಂಕ್ಷನ್-ಜಾಮ್‌ನಗರ್ ಎಕ್ಸ್‌ಪ್ರೆಸ್ ತೋಕೂರು-ರತ್ನಗಿರಿ ನಡುವೆ 3 ಗಂಟೆ ಸಂಚಾರ ಸ್ಥಗಿತಗೊಳ್ಳಲಿದೆ. ರೈಲು ನಂ.16346 ತಿರುವನಂತಪುರಂ ಸೆಂಟ್ರಲ್-ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್‌ಪ್ರೆಸ್ ತೋಕೂರು-ರತ್ನಗಿರಿ ನಡುವೆ 1.30 ನಿಮಿಷ ಸ್ಥಗಿತಗೊಳ್ಳಲಿದೆ. ಅ.10ರಂದು ರೈಲು ನಂ.12051 ಮುಂಬೈ ಜಂಕ್ಷನ್-ಮಡಗಾಂವ್ ಜಂಕ್ಷನ್ ಜನ್ಮಶತಾಬ್ದಿ ಎಕ್ಸ್‌ಪ್ರೆಸ್ ಖೇದ್-ಚಿಪ್ಲೂನ್ ನಡುವೆ 20 ನಿಮಿಷ ಸ್ಥಗಿತಗೊಳ್ಳಲಿದೆ. ಮಡಗಾಂವ್-ಕುಮಟಾ ನಡುವೆ ನಿರ್ವಹಣೆ ಪರಿಣಾಮ ಅ.12ರಂದು ರೈಲು ನಂ.06602 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ವಿಶೇಷ ಪ್ರಯಾಣ ಕುಮಟಾ ನಿಲ್ದಾಣದಲ್ಲಿ ಸ್ಥಗಿತಗೊಳ್ಳುತ್ತದೆ. ಮಡಗಾಂವ್ ನಡುವೆ ಪ್ರಯಾಣ ಭಾಗಶಃ ರದ್ದು ಮಾಡಲಾಗುವುದು. ರೈಲು ನಂ 06601 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ವಿಶೇಷ ಪ್ರಯಾಣ ಕುಮಟಾ ನಿಲ್ದಾಣದಲ್ಲಿ ಸ್ಥಗಿತಗೊಳ್ಳುತ್ತದೆ. ಮಡಗಾಂವ್ ಜಂಕ್ಷನ್-ಕುಮಟಾ ವಿಭಾಗದ ನಡುವೆ ಭಾಗಶಃ ರದ್ದಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.