ಜಿಲ್ಲೆ

ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲಿನ ಕೆಲಸ: ಶಾಸಕ ಎಸ್​.ಆರ್​.ವಿಶ್ವನಾಥ್​ ಹೇಳಿಕೆ

ಹರೀಶ್​​ ಕೆ.ಸಿ.

ಯಲಹಂಕ: ಇತ್ತೀಚಿನ ದಿನಗಳಲ್ಲಿ "ಉತ್ತಮ ಆರೋಗ್ಯ'ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ, ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡರೆ ವೈದ್ಯಕಿಯ ತಪಾಸಣೆ ಒಳಗಾಗಿ ಆರೋಗ್ಯ ಸುಧಾರಣೆ ಮಾಡಿಕೊಳ್ಳಬೇಕೆಂದು ಶಾಸಕ ಎಸ್​.ಆರ್​.ವಿಶ್ವನಾಥ್​ ಸಲಹೆ ನೀಡಿದ್ದಾರೆ.

ಸಪ್ತಗಿರಿ ಆಸ್ಪತ್ರೆ ಸಹಯೋಗದೊಂದಿಗೆ "ವಿಶ್ವವಾಣಿ' ಫೌಂಡೇಶನ್​, ಕ್ಷೇತ್ರದ ಮೈಲಪ್ಪನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು. ಅಂತಿಮ ಹಂತಕ್ಕೆ ರೋಗ ತಲುಪಿದಾಗ ತಪಾಸಣೆಗೆ ಒಳಗಾದರೆ ಆರ್ಥಿಕ ಹೊರೆಯ ಜೊತೆಗೆ ಪ್ರಯೋಜನಕಾರಿ ಆಗುವುದಿಲ್ಲ. ಈ ನಿಟ್ಟಿನಲ್ಲಿ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಫೌಂಡೇಶನ್​ ಕಾರ್ಯದರ್ಶಿ ವಾಣಿಶ್ರೀ ವಿಶ್ವನಾಥ್​ ಮಾತನಾಡಿ, ಕ್ಷೇತ್ರದ ಜನತೆಯ ಆರೋಗ್ಯ ಕಾಳಜಿ ದಿಸೆಯಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ರಕ್ತದೊತ್ತಡ, ಮಧುಮೇಹ, ಸಾಮಾನ್ಯ ತಪಾಸಣೆ, ಇಸಿಜಿ, ದಂತ, ಮೂಳೆ, ಸ್ತ್ರೀರೋಗ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ನೆರವು ಸೇರಿ ವಿವಿಧ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಸಾವಿರಾರು ಜನರು ಸದುಪಯೋಗ ಪಡೆದುಕೊಂಡಿದ್ದಾರೆ. ದುರ್ಬಲ ವರ್ಗದ ಜನತೆ ಆರೋಗ್ಯ ಕಾಳಜಿ ಮತ್ತು ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ಉದ್ದೇಶದಿಂದ ಈ ಫೌಂಡೇಶನ್​ ಸ್ಥಾಪಿಸಲಾಗಿದೆ ಎಂದರು.

ರಕ್ತದಾನ, ಉಚಿತ ಕನ್ನಡಕ, ಔಷಧ ವಿತರಣೆ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಸೇರಿ ಮುಂತಾದ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.ಫೌಂಡೇಶನ್​ ನಿರ್ದೇಶಕ ಅಲೋಕ್​ ವಿಶ್ವನಾಥ್​, ಯಲಹಂಕ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯೆ ಅಮರಾವತಮ್ಮ, ಉಪಾಧ್ಯ ಹೇಮಂತ್​ ಕುಮಾರ್​, ಬೆಂಗಳೂರು ಡೈರಿ ಮಾಜಿ ನಿರ್ದೇಶಕ ಮಾದಪ್ಪನಹಳ್ಳಿ ವಿಜಯಕುಮಾರ್​, ಗ್ರಾ.ಪಂ.ಸದಸ್ಯರಾದ ಪದ್ಮಶ್ರೀ ನಾಗರಾಜ್​ ರೆಡ್ಡಿ, ಶೋಭಾ ಗೋಪಾಲ್​, ಹರೀಶ್​,ಚೈತ್ರ ಕೆಂಪೇಗೌಡ, ಸುಧಾರಣಿ ಸೇರಿ ಸಪ್ತಗಿರಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಮತ್ತಿತರರಿದ್ದರು.