ವಿಜಯಪುರ: ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಹೆಸರನ್ನು ಪೂರ್ಣ ಪ್ರಮಾಣದಲ್ಲಿ ಪರಿಪಾಲನೆ ಮಾಡುವಂತೆ ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾ ಸಂ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರು ಪ್ರಜಾಪ್ರಭುತ್ವದ ಭಾರತ ರಾಷ್ಟ್ರಕ್ಕೆ ತಮ್ಮದೆ ಆದ ಅತ್ಯಮೂಲ್ಯ ಕೊಡುಗೆ ನೀಡಿದ ಮಹಾನಾಯಕ. ಅಂತಹ ಮಹಾನಾಯಕರ ನಾಮವನ್ನು ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಕ್ರೀಡಾಂಗಣದ ವ್ಯಾಪ್ತಿಯಲ್ಲಿನ ವಿವಿಧ ಕ್ರೀಡೆಗಳ ಸ್ಥಳಕ್ಕೆ ಕೇವಲ ಒಳಾಂಗಣ ಹಾಗೂ ಹೊರಾಂಗಣ ಅಂತಾ ನಾಮಕರಣ ಮಾಡಿದ್ದು, ಅದರಿಂದ ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಅವರಿಗೆ ತೋರುವ ಅಗೌರವವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಕೂಡಲೇ ಎಲ್ಲ ಕ್ರೀಡಾಕೂಟಗಳ ಸ್ಥಳಕ್ಕೆ ನಾಮಕರಣನ್ನು ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಒಳಾಂಗಣ / ಹೊರಾಂಗಣ ಸ್ಥಳವೆಂದು ಪೂರ್ಣ ಪ್ರಮಾಣದಲ್ಲಿ ಪರಿಪಾಲನೆ ಮಾಡುವಂತೆ ಮತ್ತು ಸದರಿ ಕ್ರೀಡಾಕೂಟಗಳ ಸ್ಥಳಕ್ಕೆ ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಒಳಾಂಗಣ/ ಹೋರಾಂಗಣ ಎಂದು ಫಲಕ ಬರೆಸುವುದು ಹಾಗೂ ಸದರಿ ಕ್ರೀಡಾಕೂಟಗಳಲ್ಲಿ ಪೂರ್ಣ ಪ್ರಮಾಣದ ಹೆಸರು ನೋಂದಾಯಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂದ ಅಧ್ಯಕ್ಷ ಚಂದ್ರಕಾಂತ ತಾರನಾಳ, ವಿನೋದ ಕೋಟಿಹಾಳ, ಆಸೀಫ್ ಬಗಲಿ, ವಿನೋದ ವ್ಯಾಸ, ದಾದಾಸಾಹೇಬ ಬಾಗಾಯತ, ವಿಲಾಸ ವ್ಯಾಸ, ಸಲ್ಮಾನ ಬಳ್ಳಾರಿ, ರವಿ ಕೊಪ್ಪದ, ಸುನೀಲ ಪಾಟೀಲ ಮತ್ತಿತರರಿದ್ದರು.