ಕಂಪ್ಲಿಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಭೆಯಲ್ಲಿ ಸದಸ್ಯರಿಗೆ ಲಾಭಾಂಶ ವಿತರಣೆಯ ಚೆಕ್ ಅನ್ನು ಬಿ.ಸಿ.ಟ್ರಸ್ಟ್ ಕಲ್ಯಾಣ ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ವಿತರಿಸಿದರು. ಪ್ರಮುಖರಾದ ರೋಹಿತಾಶ್ವ, ಎಂ.ಎ.ಹಾಲಪ್ಪ, ಆಶಾಕುಮಾರಿ, ಈರಮ್ಮ, ಮಂಜುಳಾ ಇತರರಿದ್ದರು. 
ಜಿಲ್ಲೆ

ಕೌಟುಂಬಿಕ ಸಾಮರಸ್ಯ ಕಾಪಾಡಿಕೊಳ್ಳಿ

ನರೇಶ್ ಕುಮಾರ್

ಕಂಪ್ಲಿ: ಕುಟುಂಬದ ಸಮಗ್ರ ಪರಿವರ್ತನೆ ಸಾಧಿಸುವಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಕಕ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.

ಇಲ್ಲಿನ ಶಿಬರದಿನ್ನಿಯ ಸಮುದಾಯ ಭವನದಲ್ಲಿ ಶನಿವಾರ ಎಸ್‌ಕೆಡಿಆರ್‌ಡಿಪಿ ಬಿ.ಸಿ.ಟ್ರಸ್ಟ್ ಹಮ್ಮಿಕೊಂಡಿದ್ದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಆರ್ಥಿಕ, ಸಾಮಾಜಿಕ ಶಿಸ್ತುನೊಂದಿಗೆ ಕೌಟುಂಬಿಕ ಸಾಮರಸ್ಯ ಕಾಪಾಡಿಕೊಂಡಲ್ಲಿ ಉತ್ತಮ ಬದುಕು ಸಾಧಿಸಬಹುದು ಎಂದರು.

ಜಿಲ್ಲಾ ನಿರ್ದೇಶಕ ರೋಹಿತಾಶ್ವ ಮಾತನಾಡಿ, ತಾಲೂಕಿನಲ್ಲಿ 2623 ಸ್ವಸಹಾಯ ಸಂಘಗಳು ಕಾರ್ಯನಿರತವಾಗಿವೆ. 22,866 ಸದಸ್ಯರಿದ್ದು, 10.71ಕೋಟಿ ರೂ. ಉಳಿತಾಯ ಸಾಧಿಸಿದ್ದಾರೆ. 55 ಮಹಿಳೆಯರು ಸ್ವಉದ್ಯೋಗಕ್ಕೆ ಸಾಲ ಪಡೆದು ಪ್ರಗತಿಯಲ್ಲಿದ್ದಾರೆ. 1269 ಸ್ವಸಹಾಯ ಸಂಘಗಳಿಗೆ 1.97 ಕೋಟಿ ರೂ. ಲಾಭಾಂಶ ವಿತರಿಸಲಾಗಿದೆ ಎಂದರು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಿಸಲಾಯಿತು. ಅಕ್ಕಿ ಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಯೋಜನಾಧಿಕಾರಿ ಎಂ.ಎ.ಹಾಲಪ್ಪ, ಒಕ್ಕೂಟದ ಅಧ್ಯಕ್ಷೆ ಆಶಾಕುಮಾರಿ, ಈರಮ್ಮ, ಸೇವಾಪ್ರತಿನಿಧಿ ರಮೇಶ, ಮೇಲ್ವಿಚಾರಕಿ ಮಂಜುಳಾ, ಕೃಷಿ ಮೇಲ್ವಿಚಾರಕ ಸಂಜುಕುಮಾರ್ ಇತರರಿದ್ದರು.