ಸಿರಗುಪ್ಪದ ಟಿಎಚ್‌ಒ ಕಚೇರಿ ಆವರಣದಲ್ಲಿ ಸೋಮವಾರ ಸೊಳ್ಳೆಗಳ ಜಾಗೃತಿ ಬಗ್ಗೆ ಪ್ರತಿಜ್ಞಾವಿಧಿ ಬೋದಿಸಲಾಯಿತು. ಟಿಎಚ್‌ಒ ಡಾ.ಈರಣ್ಣ, ವ್ಯೆದ್ಯಾಧಿಕಾರಿ ಮಹಾಲಕ್ಷ್ಮೀ, ಡಾ.ಮಹಮ್ಮದ್ ಖಾಸಿಂ, ತಾಲೂಕು ಹಿರಿಯ ನಿರೀಕ್ಷಣಾಧಿಕಾರಿ ಭೀಮಾರೆಡ್ಡಿ ಇದ್ದರು. 
ಜಿಲ್ಲೆ

ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ

Gangavati - Desk - Veeresh S Ullagaddi

ಸಿರಗುಪ್ಪ: ಸೊಳ್ಳೆಗಳಿಂದ ಮಲೇರಿಯಾ, ಚಿಕನ್ ಗುನ್ಯಾ, ಡೆಂೆ, ಝೀಕಾ ವೈರಸ್, ಹಳದಿ ಜ್ವರದಂತಹ ರೋಗಗಳು ಹರಡುತ್ತಿದ್ದು, ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ತಡೆಯಬೇಕು ಎಂದು ಟಿಎಚ್‌ಒ ಡಾ.ಈರಣ್ಣ ಹೇಳಿದರು.


ನಗರದ ಟಿಎಚ್‌ಒ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲರೂ ಪ್ರತಿನಿತ್ಯ ಸೊಳ್ಳೆ ಪರದೆ ಉಪಯೋಗಿಸಬೇಕು. ಸೊಳ್ಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಸೊಳ್ಳೆ ದಿನ ಆಚರಿಸಲಾಗುತ್ತದೆ ಎಂದರು.


ಸೊಳ್ಳೆಗಳ ಜಾಗೃತಿ ಬಗ್ಗೆ ಪ್ರತಿಜ್ಞಾವಿಧಿ ಬೋದಿಸಲಾಯಿತು. ವ್ಯೆದ್ಯಾಧಿಕಾರಿ ಮಹಾಲಕ್ಷ್ಮೀ, ಡಾ. ಮಹಮ್ಮದ್ ಖಾಸಿಂ, ತಾಲೂಕು ಹಿರಿಯ ನಿರೀಕ್ಷಣಾಧಿಕಾರಿ ಭೀಮಾರೆಡ್ಡಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.