ಕಂಪ್ಲಿಯ ಹೊಸೂರು ಜವುಕಿನ ಸಹಿಪ್ರಾ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರು ಅವರನ್ನು ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು. ಪ್ರಮುಖರಾದ ಕೆ.ಮಾಲಿಕ್, ಸಂತೋಷ್‌ಕುಮಾರ್, ಭೀಮೇಶ್, ಪಂಪಾಪತಿ, ರಾಮಪ್ಪ, ಈರಪ್ಪ ಸೊರಟೂರು ಇತರರಿದ್ದಾರೆ.  
ಜಿಲ್ಲೆ

ಮುಖ್ಯಶಿಕ್ಷಕನಿಗೆ ಭಾವಪೂರ್ಣ ಬೀಳ್ಕೊಡುಗೆ

ರುದ್ರಪ್ಪ ವಾಲಿ

ಕಂಪ್ಲಿ: ತಾಲೂಕಿನ ರೆಗ್ಯುಲೇಟರ್‌ಕ್ಯಾಂಪ್ ಬಳಿ ಹೊಸೂರು ಜವುಕಿನ ಸಹಿಪ್ರಾ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರು ಗದಗ ಜಿಲ್ಲೆಯ ಆದರಳ್ಳಿಗೆ ವರ್ಗಗೊಂಡಿದ್ದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಭಾವಪೂರ್ಣ, ಗೌರವಾಧರಗಳೊಂದಿಗೆ ಶುಕ್ರವಾರ ಬೀಳ್ಕೊಟ್ಟರು.

ಹೆಚ್ಚು ಅಂಕ

ವರ್ಗಗೊಂಡ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರು ಮಾತನಾಡಿ, 15ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿದ ನೆನಪಿಗಾಗಿ ತಮ್ಮ ತಂದೆ ತಾಯಿಗಳಾದ ಸುವರ್ಣ ಬಸವಂತಪ್ಪ ಉಪ್ಪಿನಮೇಟಿಗೌಡ್ರು ಹೆಸರಿನಲ್ಲಿ 25ಸಾವಿರ ರೂ. ಠೇವಣಿ ಇರಿಸಿ, ಬಂದ ಬಡ್ಡಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಗುವುದು ಎಂದರು.

ಶಾಲೆಯಿಂದ ಗ್ರಾಮದ ಅಯ್ಯಪ್ಪಸ್ವಾಮಿ ಗುಡಿಯವರೆಗೆ ಟ್ರ್ಯಾಕ್ಟರ್‌ನಲ್ಲಿ ವರ್ಗಗೊಂಡ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರ ಅವರನ್ನು ಮೆರವಣಿಗೆ ಮಾಡಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷೆ ಪಾರ್ವತಿ ಅಂಜಿನಪ್ಪ, ಉಪಾಧ್ಯಕ್ಷ ಭೀಮೇಶ, ಗ್ರಾಮದ ಮುಖಂಡರಾದ ಪಂಪಾಪತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಎನ್.ಸುಧಾಕರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ.ಎ.ನಾಗನಗೌಡ, ರೇವಣಸಿದ್ದೇಶ, ಗುರುಬಸವರಾಜ, ಮುಖ್ಯಶಿಕ್ಷಕ ಎಚ್.ಪಿ.ಸೋಮಶೇಖರ ಇತರರಿದ್ದರು.