ಲಿಂಗಸುಗೂರು ಎಸಿ ಕಚೇರಿ ತಹಸೀಲ್ದಾರ್ ನಾಗರಾಜಗೆ ಪುರಸಭೆ ಸದಸ್ಯರು ಮನವಿ ಸಲ್ಲಿಸಿದರು. ಸದಸ್ಯರಾದ ಶಿವರಾಯ ದೇಗಲಮಡಿ, ಪ್ರಭುಸ್ವಾಮಿ ಅತ್ನನೂರು, ಮೌಲಸಾಬ್, ಪ್ರಮೋದ ಕುಲಕರ್ಣಿ, ಯಮನಪ್ಪಗೌಡ, ದೊಡ್ಡನಗೌಡ ಹೊಸಮನಿ ಇತರರಿದ್ದರು. 
ಜಿಲ್ಲೆ

ಮುಖ್ಯರಸ್ತೆ ಐವತ್ತು ಅಡಿಗೆ ವಿಸ್ತರಿಸಿ

ರುದ್ರಪ್ಪ ವಾಲಿ

ಲಿಂಗಸುಗೂರು: ಪಟ್ಟಣದ ಡಿವೈಎಸ್‌ಪಿ ಕಚೇರಿಯಿಂದ ಲಕ್ಷ್ಮೀ ದೇವಸ್ಥಾನದವರೆಗಿನ ಮುಖ್ಯರಸ್ತೆ 50ಅಡಿ ವಿಸ್ತರಣೆಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಪುರಸಭೆ ಸದಸ್ಯರು ಎಸಿ ಕಚೇರಿ ತಹಸೀಲ್ದಾರ್ ನಾಗರಾಜಗೆ ಬುಧವಾರ ಮನವಿ ಸಲ್ಲಿಸಿದರು.

ಮುಖ್ಯರಸ್ತೆ ಡಾಂಬರೀಕರಣ ಮತ್ತು ಚರಂಡಿ ಕಾಮಗಾರಿ ಆರಂಭಿಸಿದ್ದು, ಡಿವೈಡರ್ ಮಧ್ಯಭಾಗದಿಂದ ಎರಡೂ ಬದಿ 50ಅಡಿ ವಿಸ್ತರಿಸಬೇಕು. ಈ ಹಿಂದೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾಡಿದ ಠರಾವು ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ.

ಚರಂಡಿ ನಿರ್ಮಿಸಬೇಕು ಎಂದು ಮನವಿ

ಬಸ್ ನಿಲ್ದಾಣ ಎದುರಿಗಿನ ಅಂಗಡಿ ಮತ್ತು ಮನೆಗಳ ಮಾಲೀಕರು ರಸ್ತೆ ಅತಿಕ್ರಮಿಸಿ ಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಸ್ತೆ ಅತಿಕ್ರಮಣದಿಂದ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ರಸ್ತೆ ಡಾಂಬರೀಕರಣ ಮತ್ತು ಚರಂಡಿ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದರು.


ಶಾಂತಮ್ಮ ಶಿವಪ್ಪ, ಫಾತೀಮಾ, ಶಶಿಕಲಾ ರಾಜಪ್ಪ, ಮುದಕಪ್ಪ ನಾಯಕ, ಜರೀನಾ ಬೇಗಂ, ಮುಖಂಡರಾದ ಪರಶುರಾಮ ಕೆಂಭಾವಿ, ಅಬ್ದುಲ್ ಬೇಕರಿ ಇತರರಿದ್ದರು.