ರಟ್ಟಿಹಳ್ಳಿ: ಪಟ್ಟಣದ ಖಬರಸ್ತಾನ ಹಿಂಭಾಗದ ಉಜ್ಜಕ್ಕಳವರ ಜಮೀನಿನಲ್ಲಿ ಅಪಾಯದ ಸ್ಥಿತಿಯಲ್ಲಿ ಜೋತು ಬಿದ್ದಿರುವ ವಿದ್ಯುತ್ ಸಂಪರ್ಕವಿರುವ ಎ.ಜಿ. ಕೇಬಲ್ ಅನ್ನು ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಪಟ್ಟಣದ ಗ್ರಿಡ್ನಿಂದ ದೊಡ್ಡಗುಬ್ಬಿ- ಮಾದಪುರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಪೂರೈಸುವ ಈ ಮುಖ್ಯ ವಿದ್ಯುತ್ ಕೇಬಲ್ ಕಳೆದ 25 ದಿವಸಗಳಿಂದ ಕೆಳಗೆ ಜೋತು ಬಿದ್ದಿದ್ದು, ಜನರಿಗೆ ತಾಗುವಂತಿದೆ.
ವಿದ್ಯುತ್ ಕಂಬದಲ್ಲಿನ ಕ್ಲಾಂಪ್ಗಳು ಮುರಿದಿರುವುದರಿಂದ ವಿದ್ಯುತ್ ಕೇಬಲ್ ಕೆಳಗೆ ಜೋತು ಬಿದ್ದು, ಕಾಂಪೌಂಡ್ ಆಸರೆಯಲ್ಲಿ ತೂಗುತ್ತಿದೆ. ಈ ಜಮೀನನಲ್ಲಿ ಅಕ್ಕಪಕ್ಕದ ನಿವಾಸಿಗಳು ಓಡಾಡುವುದರಿಂದ ಅಪಾಯಕ್ಕೆ ಆಹ್ವಾನಿಸುವಂತಿದೆ. ರಾತ್ರಿ ವೇಳೆ ಕೇಬಲ್ಗಳು ಕಾಣುವುದಿಲ್ಲ. ಮುಖ್ಯ ವಿದ್ಯುತ್ ತಂತಿಗಳು ಆಗಿರುವುದರಿಂದ ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಹೆಸ್ಕಾಂ ಈ ಕೇಬಲ್ಗಳನ್ನು ಮೇಲಕ್ಕೆ ಎತ್ತರಿಸುವ ಕೆಲಸ ಮಾಡಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಂದು ತಿಂಗಳಿನಿಂದ ಈ ವಿದ್ಯುತ್ ಕೇಬಲ್ಗಳು ಜೋತು ಬಿದ್ದಿವೆ. ಸಾರ್ವಜನಿಕರು, ದನಕರುಗಳು ಇಲ್ಲಿ ನಿತ್ಯ ಸಂಚಾರ ಮಾಡುತ್ತಾರೆ. ಈ ವಿದ್ಯುತ್ ಕೇಬಲ್ ಸರಪಡಿಸುವಂತೆ ಹೆಸ್ಕಾಂಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈಗಲಾದರೂ ಸಮಸ್ಯೆಗೆ ಸ್ಪಂದಿಸಿ ಅಪಾಯ ತಪ್ಪಿಸಬೇಕಾಗಿದೆ.| ಮರಿಯಪ್ಪ ಅಂಬಿಗೇರ ಸ್ಥಳೀಯ ನಿವಾಸಿಜೋತು ಬಿದ್ದಿರುವ ವಿದ್ಯುತ್ ಕೇಬಲ್ ದುರಸ್ತಿಗೆ ಸಂಬಂಧಿಸಿದಂತೆ ಶೀಘ್ರವೇ ಸ್ಥಳಕ್ಕೆ ಸಿಬಂದಿ ಕಳುಹಿಸಿ, ಕೇಬಲ್ ಅನ್ನು ಮೇಲ್ಮಟಕ್ಕೆ ಎತ್ತರಿಸಲು ಕ್ರಮ ಕೈಗೊಳ್ಳಲಾಗುವುದು.| ರಾಜು ಮರಿಗೌಡ್ರ ಹೆಸ್ಕಾಂ ಇಂಜಿನಿಯರ್ ರಟ್ಟಿಹಳ್ಳಿ