ಕಲಘಟಗಿ: ತಾಲೂಕಿನ ಮುಕ್ಕಲ್ಲ ಗ್ರಾಮ ಪಂಚಾಯಿತಿ ಸುತ್ತಲಿನ ಹಳ್ಳಿಗಳಲ್ಲಿ ಕಾಡು ಹಂದಿಗಳ ಹಾವಳಿ ತೀವ್ರ ಹೆಚ್ಚಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಮುಕ್ಕಲ ಗ್ರಾಮದ ಮಂಜುನಾಥ ಸಂಕಪ್ಪ ಜಾಯನಗೌಡರ ಅವರಿಗೆ ಸೇರಿದ ಮೂರು ಎಕರೆ ಹೊಲದಲ್ಲಿ ಬೆಳೆದ ಮೆಕ್ಕೆಜೋಳ ಕಾಡುಹಂದಿಗಳ ಹಾವಳಿಯಿಂದ ಸಂಪೂರ್ಣ ನಾಶವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳೆಹಾನಿ ಪರಿಶೀಲಿಸಿ ಪರಿಃಆರ ಒದಗಿಸಬೇಕು ಎಂದು ಮುಕ್ಕಲ್ಲ, ಕೆ.ಹುಣಶಿಕಟ್ಟಿ, ಬೀದರಗಟ್ಟಿ, ಆಸ್ತಕಟ್ಟಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.