ಹಳೇಬೀಡು: ಶಿಕ್ಷಕಿಯರು ಮಾತೃ ಸ್ವರೂಪಿಗಳಾದಾಗ ಮಾತ್ರ ಮಗುವಿನ ಪ್ರಾಥಮಿಕ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶಿವಮರಿಯಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್‌ಜಿಆರ್ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿ ಮಹಿಳೆಯನ್ನೂ ಮಾತೃ ಸಮಾನವಾಗಿ ನೋಡುವ ಪರಂಪರೆ ನಮ್ಮದು. ಜಗನ್ಮಾತೆ ಸ್ವರೂಪದಲ್ಲಿ ಮಾತೆಯರನ್ನು ಆರಾಧನೆ ಮಾಡುವ ಸಂಪ್ರದಾಯ ನಮ್ಮ ನಾಡಿನಲ್ಲಿದೆ. ಇಂಥವರು ಶಿಕ್ಷಕಿಯರಾಗಿ ಸೇವೆ ಸಲ್ಲಿಸುವಾಗಮಾತೃತ್ವ ಗುಣ ಹೊಂದಿದ್ದರೆ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರಕುತ್ತದೆ ಎಂದರು.
ಜ್ಞಾನಾರ್ಜನೆ ಸಂಕೇತವಾಗಿ ಇಲ್ಲಿ ದೀಪವನ್ನು ಹೊತ್ತಿಸಿ, ವಿದ್ಯಾರ್ಥಿಗಳಿಗೆ ಕೊಡುವ ಪರಿಪಾಠ ರೂಢಿಸಿರುವುದು ಶ್ಲಾಘನೀಯ. ಜ್ಞಾನದ ಜ್ಯೋತಿ ಎಲ್ಲರಲ್ಲಿ ಸದಾ ಬೆಳಗಲಿ ಎಂದು ಅವರು ಹಾರೈಸಿದರು. ಮುಖ್ಯ ಶಿಕ್ಷಕ ಸಿದ್ದೇಶ ಮಾತನಾಡಿದರು. 10ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪಪ್ರದಾನ ಮಾಡಿ ಶುಭ ಕೋರಿದರು. ಮುಖ್ಯ ಶಿಕ್ಷಕಿ ಮಮತಾ, ಕಾರ್ಯದರ್ಶಿ ಸುರೇಶ್ ಇತರರು ಪಾಲ್ಗೊಂಡಿದ್ದರು.
0