ಜಿಲ್ಲೆ

ಸೆ.28ಕ್ಕೆ ಮಡಿಕೇರಿಯಲ್ಲಿ ಮಹಿಳಾ ದಸರಾ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ 8 ನೇ ವರ್ಷದ ಮಹಿಳಾ ದಸರಾ ಆಯೋಜಿಸಲಾಗಿದ್ದು, ಈ ಸಂಬAಧ ಸೆ. 28 ರಂದು ವೈವಿಧ್ಯಮಯ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಮಡಿಕೇರಿ ದಸರಾ ಸಮಿತಿ, ಮಡಿಕೇರಿ ನಗರಸಭೆ ಅಧ್ಯಕ್ಷರು, ಸದಸ್ಯೆಯರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೆಹಂದಿ ಹಾಕುವುದು, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಕೇಶವಿನ್ಯಾಸ, ಸೀರೆಗೆ ನಿಖರ ಬೆಲೆ ಹೇಳುವುದು, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಕೆರೆ ದಡ ಆಟ, ಹಣೆಯಲ್ಲಿ ಬಿಸ್ಕೆಟ್ ಇಟ್ಟು ತಿನ್ನುವುದು, ಬಲೂನ್ ಕಾಲಲ್ಲಿ ಹಿಡಿದು ಓಡುವುದು, ಜಾನಪದ ನೃತ್ಯ, ವಾಲಗ ಕುಣಿತ(60 ವರ್ಷ ಒಳಗಿನವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗ), ದಸರಾಗೆ ಸಂಬAಧಿಸಿದAತೆ ರಸಪ್ರಶ್ನೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮೇಕಪ್ ಮಾಡುವ ಸ್ಪರ್ಧೆ, ಕೇಶವಿನ್ಯಾಸ, ಮೆಹಂದಿ, ಸ್ಪರ್ಧೆಗಳಿಗೆ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಸೆ. 28 ರಂದು ಮಹಿಳಾ ದಸರಾ ದಿನದಂದೇ ಸ್ಪರ್ಧಿಗಳು ತಮ್ಮ ಹೆಸರನ್ನು ಬೆಳಗ್ಗೆ ಒಂಭತ್ತು ಗಂಟೆಗೆ ಆಗಮಿಸಿ ನೋಂದಾಯಿಸಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಬಾರಿ ಹೆಚ್ಚಿಗೆ ಸೀರೆಗಳನ್ನು ಸ್ಪರ್ಧೆಗೆ ಇರಿಸಲಾಗುವದೆಂದು ಸಂತೋಷ್ ತಿಳಿಸಿದ್ದಾರೆ.

ಮಹಿಳಾ ದಸರಾ ಸಂಬAಧ ಮಹಿಳೆಯರು ತಯಾರಿಸಿದ ಉತ್ಪನ್ನಗಳು ಹಾಗೂ ಇತರ ಉತ್ಪನ್ನಗಳು, ಗಿಡಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಸ್ಟಾಲ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. 15 ಸ್ಟಾಲ್‌ಗಳಿಗೆ ಅವಕಾಶವಿದೆ.

ಈ ಸಂಬAಧ ಶುಕ್ರವಾರ ನಡೆದ ಪೂರ್ವಭಾವಿ ತಯಾರಿ ಸಭೆಯಲ್ಲಿ ನಗರಸಭೆ ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸಂತೋಷ್, ದಸರಾ ಸಮಿತಿ ಖಜಾಂಚಿ ಸಬಿತಾ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತಾ ಕೀರ್ತನ್, ನಗರಸಭೆ ಸದಸ್ಯರಾದ ಉಷಾ ಕಾವೇರಪ್ಪ, ಚಿತ್ರಾವತಿ, ಕಳೆದ ಸಾಲಿನ ಮಹಿಳಾ ದಸರಾ ಸಂಚಾಲಕಿಯಾಗಿದ್ದ ಕುಡೆಕಲ್ ಸವಿತಾ, ಸಾಂಸ್ಕೃತಿಕ ಸಮಿತಿ ಸದಸ್ಯರುಗಳಾದ ಅಂಜಲಿ ಅಶೋಕ್, ಕೇಡನ ಪ್ರಗತಿ, ಬಾಳೆಯಡ ದಿವ್ಯ ಮಂದಪ್ಪ, ಹೇಮಾ ಅಜಿತ್, ಮಹಿಳಾ ದಸರಾ ಸದಸ್ಯೆಯರಾದ ಪವಿತ್ರ ಗಿರೀಶ್, ಪ್ರೇಮ, ಜಶ್ಮಿತಾ, ನೇತ್ರ ಇದ್ದರು.