ರಾಯಚೂರು ಮಹೇಶ ಶೆಟ್ಟಿ ತಿಮರೋಡಿಯನ್ನು ಜಿಲ್ಲೆಯ ಮಾನ್ವಿಗೆ ಗಡಿಪಾರು ಬೇಡ ಕಾಡಿಗೆ ಕಳುಹಿಸೆಂದು ಒತ್ತಾಯಿಸಿ ದಲಿತ ಸೇನೆ ಮತ್ತು ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಮಾರುತಿ ಬಡಿಗೇರ ಮಾತನಾಡಿ, ಬುರುಡೆ ಗ್ಯಾಂಗ್ ಮುಖ್ಯಸ್ಥ ಮಹೇಶ ತಿಮರೋಡಿಯನ್ನು ಮಾನ್ವಿಗೆ ಗಡಿಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಂತಹ ಆರೋಪಿ ಸಮೃದ್ದ ಜಿಲ್ಲೆಯಾದ ರಾಯಚೂರಿಗೆ ಬರಬಾರದೆಂಬ ಒತ್ತಾಯವಿದ್ದು, ಮುಖ್ಯಮಂತ್ರಿಗಳು, ಗೃಹ ಸಚಿವರು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಮಾನ್ವಿಗೆ ಗಡಿಪಾರು ಮಾಡಿರುವುದನ್ನು ತಕ್ಷಣ ವಾಪಸ್ ಪಡೆದು ಯಾವುದಾದರು ಕಾಡಿಗೆ ಅಂತಹ ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವಿದ್ ಖಾನ್ ಮಾತನಾಡಿ, ನಮ್ಮ ಜಿಲ್ಲೆ ಶಾಂತಿಯ ತೋಟವಾಗಿದ್ದು, ಇಲ್ಲಿ ಅಶಾಂತಿ ಹುಟ್ಟು ಹಾಕದೆ ಇಂತ ಕ್ರಿಮಿನಲ್‌ಗಳನ್ನು ನಮ್ಮ ಜಿಲ್ಲೆಗೆ ಬೇಕಾಗಿಲ್ಲ. ಬೇರೆ ಜಿಲ್ಲೆಗೂ ಕಳಿಸಬೇಡಿ ಯಾವುದಾದರೂ ಕಾಡಿಗೆ ಕಳಿಸಿ ಎಂದು ಒತ್ತಾಯಿಸಿದರು. ಮಾನ್ವಿ ಮಾನವೀಯತೆಯ ತಾಲೂಕ ಆಗಿದೆ ಇಂತದರಲ್ಲಿ ಇಂತ ಕ್ರಿಮಿನಲ್‌ಗಳು ಬೇಕಾಗಿಲ್ಲ ದಯಮಾಡಿ ಗಡಿಪಾರು ಆದೇಶ ಮಾನ್ವಿ ತಾಲೂಕಿಗೆ ಹಾಕಿರುವುದನ್ನು ರದ್ದುಪಡಿಸಿ ಸರ್ಕಾರ ಕೂಡಲೇ ಬೇರೆ ಕಡೆ ಹಾಕಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸೌಹಾರ್ದತ ಸಮಿತಿಯ ಮುಖ್ಯ ಸಂಯೋಜಕ ಆಲಂ ಘನಿ. ಮೌನೇಶ್ ವಡವಾಟಿ. ಮೊಹಮ್ಮದ ಶಾಲಂ. ವಿನೋದ್ ಕುಮಾರ, ಅಲ್ಲಾವಲಿ ಸೇರಿ ಅನೇಕರು ಇದ್ದರು.