ಗದಗ ಮಹೇಶ್ ನಾಲ್ವಾಡ್ ಪ್ರತಿಷ್ಠಾನದಿಂದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಕೈಪಿಡಿ, ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆ ಪತ್ರಿಕೆ ವಿತರಿಸಲಾಗುವುದು ಎಂದು ಡಾ. ಮಹೇಶ್ ನಾಲ್ವಾಡ ಹೇಳಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿ.22 ರಂದು ಬೆಳಗ್ಗೆ 10.30 ಕ್ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ 127 ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ತದನಂತರ ವೀರೇಶ್ವರ ಪುಣ್ಯಾಶ್ರಮದ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಎಂದರು.
ಕೈಪಿಡಿಯಲ್ಲಿ ಕಳೆದ ನಾಲ್ಕು ವರ್ಷದ ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮಾದರಿಗಳು ಇದೆ. ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶನ ನೀಡಲಿದೆ. ಅದರೊಂದಿಗೆ ಆರೋಗ್ಯ ಕುರಿತು ಮಾಹಿತಿ ಇರಲಿದೆ. ಉತ್ತರ ಕರ್ನಾಟಕದ ಬಹುಮುಖ್ಯ ಖಾದ್ಯ ಅಂಟಿನ ಊಂಡಿ, ಶೇಂಗಾ ಊಂಡಿ ಸೇವಿಸುವುದರಿಂದ ಆಗುವ ಲಾಭಗಳ ಕುರಿತು ಮಾಹಿತಿ ಹೊಂದಿದೆ. ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಕುರಿತು ಮಾಹಿತಿ ಇದೆ. ಡಿ.22 ರ ಕಾರ್ಯಕ್ರಮದಲ್ಲಿ ವೈದ್ಯರು ಆರೋಗ್ಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.
45000 ಕೈಪಿಡಿ ಮುದ್ರಣ ಮಾಡಲಾಗಿದೆ. ಮೊದಲನೇ ಹಂತದಲ್ಲಿ 9000 sslc ಮಕ್ಕಳಿಗೆ ಕೈಪಿಡಿ ವಿತರಿಸಲಿದ್ದೇವೆ. ಆರಂಭದಲ್ಲಿ ಗದಗ ಜಿಲ್ಲೆಗೆ ಆಧ್ಯತೆ ನೀಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ಹಂಚಲಾಗುವುದು. ಪ್ರತಿಷ್ಠಾನದಿಂದ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ಹೇಳಿದರು.
ಬಸಣ್ಣ ಗಾಣಿಗೇರಿ, ಅಖಿಲ್ ಹಲಗತ್ತಿ, ರಾಜೇಂದ್ರ ಹೊಂಗಲ್ ಇದ್ದರು.