ಬೆಳಗಾವಿ ನಗರದಲ್ಲಿ ನಡೆದ ಮಹೇಶ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು ಪ್ರಮಾಣ ಪತ್ರ ಪ್ರದರ್ಶಿಸಿದರು. ಎಂ.ವಿ. ಭಟ್,ಮಂಜುನಾಥ ದೇಗನಳ್ಳಿ, ಸೋಮಶೇಖರ ಎಸ್., ವಿಶಾಲ ಮಿರ್ಜಿ ಇತರರಿದ್ದರು. 
ಜಿಲ್ಲೆ

ಮಹೇಶ ಪದವಿ ಪೂರ್ವ ಕಾಲೇಜಿನ ಉತ್ತಮ ಸಾಧನೆ

ಬೆಳಗಾವಿ: ಇಲ್ಲಿನ ಮಹೇಶ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹೇಶ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಆದರ್ಶ ಮೇತ್ರೆ, ಬಾಲಕಿಯರ ವಿಭಾಗದಲ್ಲಿ ಸಾಕ್ಷ್ಮೀ ರೇಂದಾಳೆ ನೇತೃತ್ವದ ತಂಡ ಗೆಲುವು ಸಾಧಿಸಿದೆ. ಮತ್ತೊಂದೆಡೆ ಚೇತನ ಕರಗುಪ್ಪಿ ಹಾಗೂ ನಿವೇದಿತಾ ಗಡ್ಕರಿ ತಂಡಗಳು ರನ್ನರ್ ಆಪ್ ಆಗಿವೆ. ಮಹೇಶ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಪ್ರಾಚಾರ್ಯ ಎಂ.ವಿ.ಭಟ್ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಉಪನ್ಯಾಸಕರಾದ ಮಂಜುನಾಥ ದೇಗನಳ್ಳಿ, ಸೋಮಶೇಖರ ಎಸ್., ವಿಶಾಲ ಮಿರ್ಜಿ, ಮಂಗೇಶ ಭಟ್, ಯೋಗೀಶ ಗಂದಿಗವಾಡ, ಸ್ಮೀತಾ ಪವಾರ, ಸುರವು ಜಯಶ್ರೀ, ಸ್ನೇಹಾ ಕೊಟಬಾಗಿ ಇತರರಿದ್ದರು.