ಜಿಲ್ಲೆ

ಗೋವುಗಳಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಿ: ಕೇಂದ್ರಕ್ಕೆ ಮಹೇಂದ್ರ ಮುಣೋತ್​ ಮನವಿ

ಬೆಂಗಳೂರು: ಕೇಂದ್ರ ಸರ್ಕಾರವು ಗೋವುಗಳಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಬೇಕು ಎಂದು ಮಾರುತಿ ಮೆಡಿಕಲ್ಸ್​ ಮಾಲೀಕ ಮಹೇಂದ್ರ ಮುಣೋತ್​ ಹೇಳಿದ್ದಾರೆ.

ಮೋತಿಲಾಲ್​ ಮುಣೋತ್​ ಜೈನ್​ ಮತ್ತು ವಿಮಲಾಬಾಯಿ ಮುಣೊತ್​ ಜೈನ್​ ಸ್ಮರಣಾರ್ಥ ಕನಕಪುರ ರಸ್ತೆಯ ಅಮೃತಧಾರ ಗೋಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗೋವಿನ ಉಪಯುಕ್ತತೆ ಪರಿಗಣಿಸಿ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಬೇಕು. "ಗೋವು ದೇಶದ "ಪ್ರಾಣಿ'ಮಾತ್ರವಲ್ಲ, ದೇಶದ "ಪ್ರಾಣ'ಯೂ ಹೌದು. ಹಾಗಾಗಿ, ಗೋವುಗಳ ರಕ್ಷಣೆಗೆ ಕಠಿಣ ಕಾನೂನು ರೂಪಿಸಬೇಕಿದೆ ಎಂದರು.

ಗೋವುಗಳ ರಕ್ಷಣೆ, ಸೇವೆಗೆ ಮಹೇಂದ್ರ ಮುಣೋತ್​ ಕುಟುಂಬ 51 ಲಕ್ಷ ರೂ. ದೇಣಿಗೆ ನೀಡಿತು. ಈ ವೇಳೆ ಎಲ್ಲ ಗೋಶಾಲೆಗಳಲ್ಲಿ ಸಸಿ ನೆಡುವ ಸಂಕಲ್ಪದ ವೃಕ್ಷರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೃಷ್ಣ ಗೋಶಾಲೆ ಮುಖ್ಯಸ್ಥ ಸಂತ ಪುಖರಾಜ್​, ಆರ್​.ಆರ್​.ನಗರದ ಪ್ರಭುಪಾದ ಗೋಶಾಲೆ ಮುಖ್ಯಸ್ಥ ಆನಂದ್​ ಕೃಷ್ಣದಾಸ್​ ಸೇರಿ ವಿವಿಧ ಗೋಶಾಲೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.