ಹುಬ್ಬಳ್ಳಿ : ಸಸಿಗಳನ್ನು ನೆಟ್ಟು, ಬೆಳೆಸಬೇಕು ಹಾಗೂ ಅವುಗಳನ್ನು ರಕ್ಷಿಸಬೇಕು ಎಂದು ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ಹೇಳಿದರು.
ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ನೀರನ್ನು ಮಿತವಾಗಿ ಬಳಕೆ ಮಾಡಬೇಕು. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಮನೆಯಲ್ಲಿ ಇಂಗು ಗುಂಡಿ ನಿರ್ವಿುಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಖಜಾಂಚಿ ಆರ್.ಟಿ. ತವನಪ್ಪನವರ ಅತಿಥಿಯಾಗಿದ್ದರು. ಮುಖ್ಯ ಶಿಕ್ಷಕಿ ಶೋಭಾ ಯಾವಗಲ್, ಭಾಗ್ಯವತಿ ಬತೂಲಾ, ಸಿಬ್ಬಂದಿ ರಾಜೇಶ್ವರಿ ವೆರ್ಣೆಕರ, ದೀಪಾ ಪತ್ರಾವಳಿ, ಪೂಜಾ ದೇವಳೆ, ಚಂದ್ರಿಕಾ ಉಪಾಧ್ಯಾಯ, ಕಾಂಚನಮಾಲಾ ನಾಗರಳ್ಳಿ, ಮೇಹರ ಶೇಖ, ರಂಜಿತಾ ಕುತ್ತೆ, ಅರ್ಚನಾ ಕಲಾಲ ಹಾಗೂ ಇತರರು ಇದ್ದರು.
ವಿದ್ಯಾರ್ಥಿನಿಯರು ಸಾಲುಮರದ ತಿಮ್ಮಕ್ಕ ಕುರಿತ ನಾಟಕ ಪ್ರದರ್ಶನ ಮಾಡಿದರು. ಸುಮಾ ನೇಗಿನಹಾಳ ನಿರೂಪಿಸಿದರು. ಪೂರ್ಣಿಮಾ ಹನಮಸಾಗರ ವಂದಿಸಿದರು.