ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಭಾರತದ ಇತಿಹಾಸದಲ್ಲಿ ಕಾಲಕಾಲಕ್ಕೆ ಮಹಾಪುರುಷರು ಒದಗಿ ಬಂದಿದ್ದು, ಸಮ್ಯಕ್ ದರ್ಶನ ಬೋಧನೆ ಮೂಲಕ ಸಾಧಕರಿಗೆ ಮಾರ್ಗದರ್ಶಿಯಾಗಿ ವರ್ಧಮಾನ ಮಹಾವೀರ ಮೂಡಿಬಂದಿದ್ದಾರೆ. ನಮ್ಮ ಜೀವನದಲ್ಲಿ ಇದನ್ನು ಪರಿಗಣಿಸಬೇಕು. ಜೈನ ಧರ್ಮದ ಕೊಡುಗೆಗಳನ್ನು ಜನರು ಗುರುತಿಸಬೇಕು ಎಂಬ ದೃಷ್ಟಿಯಿಂದ ಮಹಾವೀರ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಮಹಾವೀರ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಮಾತನಾಡಿದರು. ಜೈನ್ ಮಿಲನ್ ಅಧ್ಯಕ್ಷ ಮಧ್ವರಾಜ್ ಜೈನ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ರಾಜೇಶ್ ನಾಯ್ಕ, ಕೇಂದ್ರ ಸ್ಥಾನಿಯ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ವಿಷುಕುಮಾರ್, ಪ್ರಮುಖರಾದ ನವೀನ್ ಕುಮಾರ್ ಬೆಂಜನಪದವು, ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕ ರವಿ ಎಂ.ಎನ್., ತಾಲೂಕು ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಜನಾರ್ದನ ವಂದಿಸಿದರು.
ಮಹಾವೀರರು ಪ್ರತಿಯೊಂದು ಜೀವಿಗೂ ಬದುಕಲು ಹಾಗೂ ತನ್ನನ್ನು ಉದ್ಧರಿಸುವ ಅವಕಾಶ ಇದೆ ಎಂದರು. ಅಹಿಂಸೆ ಎಂಬ ವ್ಯಾಖ್ಯಾನವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಅಗತ್ಯ. ಮನುಕುಲಕ್ಕೆ ಕೊಟ್ಟ ಕೊಡುಗೆಗಳನ್ನು ಅರಿತುಕೊಳ್ಳಬೇಕು. ಶಿವಪ್ರಸಾದ್ ವಕೀಲ https://www.vijayavani.net/music-with-cleanness-dakshina-kannada https://www.vijayavani.net/inauguration-of-kanara-vikas-clinic-physiotherapy-centre