ಜಿಲ್ಲೆ

ಧರ್ಮ ತೀರ್ಥ ಚಿಂತನೆಯಿಂದ ಜಗದ ಕ್ಷೇಮ : ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಸರ್ವೋದಯ ಧರ್ಮ ತೀರ್ಥ ಚಿಂತನೆ ಮೂಲಕ ಮಹಾವೀರರು ಜಗದ ಎಲ್ಲರಿಗೂ ಕ್ಷೇಮ ಕಲ್ಪಿಸುವ ಯೋಚನೆ, ಚಿಂತನ ಕ್ರಮ ಹೊಂದಿದ್ದರು. ವಿಶ್ವ ಶಾಂತಿಯ ಮೂಲ ಆಶಯವನ್ನು ದೇಶದಿಂದ ಜಗತ್ತಿಗೆ ಬಿತ್ತರಿಸಿದವರು ಭಗವಾನ್ ಮಹಾವೀರರು ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಮೂಡುಬಿದಿರೆ ತಾಲೂಕು ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಮಾತನಾಡಿ, ಅಹಿಂಸಾ ಪರಮೋಧರ್ಮ ಎಂಬ ಮಹಾವೀರರ ಸಂದೇಶ ಇಂದಿಗೂ ಪ್ರಸ್ತುತ ಎಂದರು.

ತಹಸೀಲ್ದಾರ್ ಶ್ರೀಧರ ಮಾತನಾಡಿ ಶಾಂತಿ, ಸಹಬಾಳ್ವೆ ಮೂಲಕ ಮನುಕುಲ ಜೀವನ ಸಾಂಗವಾಗಿ ನಡೆಯುವುದನ್ನು ತಿಳಿಸಿಕೊಟ್ಟವರು ಮಹಾವೀರರು ಎಂದರು.

ಶಾಸಕ ಉಮಾನಾಥ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ ಶೆಟ್ಟಿ, ಬಿಇಒ ವಿರೂಪಾಕ್ಷಪ್ಪ ಮುಖ್ಯ ಅತಿಥಿಗಳಾಗಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್, ವಿವಿಧ ಇಲಾಖೆ ಅಧಿಕಾರಿಗಳು, ಉಪತಹಸೀಲ್ದಾರರಾದ ಬಾಲಚಂದ್ರ, ತಿಲಕ್ ಕುಮಾರ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.