ಚಿಕ್ಕಮಗಳೂರಿನ ಲಯನ್ಸ್ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಹಾತ್ಮಗಾಂಧಿ ಮತ್ತು ಲಾಲ್‌ಬಹದ್ದೂರ್‌ಶಾಸ್ತಿçಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಲಯನ್ಸ್ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಪ್ರೊ.ಜಗದೀಶಪ್ಪ ಮಾತನಾಡಿದರು. ಕೆ.ಪುಷ್ಪರಾಜ್, ಎಚ್.ಡಿ.ಸುರೇಶ್, ಗೋಪಿಕೃಷ್ಣ, ಸಿ.ಎನ್.ಕುಮಾರ್, ಎಚ್.ಆರ್.ಹರೀಶ್ ಮತ್ತಿತರರಿದ್ದರು. 
ಜಿಲ್ಲೆ

ಮಹಾತ್ಮರ ಸಿದ್ಧಾಂತಗಳು ಎಂದಿಗೂ ಪ್ರಸ್ತುತ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್‌ಶಾಸ್ತಿç ಅವರ ತತ್ವ ಸಿದ್ಧಾಂತಗಳು ಎಂದೆAದಿಗೂ ಪ್ರಸ್ತುತ. ಇಂತಹ ಮಹಾತ್ಮರ ಆದರ್ಶಗಳನ್ನು ಇಂದಿನ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಲಯನ್ಸ್ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಪ್ರೊ.ಜಗದೀಶಪ್ಪ ತಿಳಿಸಿದರು.

ನಗರದ ಲಯನ್ಸ್ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಹಾತ್ಮಗಾಂಧಿ ಮತ್ತು ಲಾಲ್‌ಬಹದ್ದೂರ್‌ಶಾಸ್ತಿçಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿಪ್ರಿಯವಾದ ಭಾರತದಲ್ಲಿ ಹಿಂಸಾ ಮಾರ್ಗವನ್ನು ಬದಿಗೊತ್ತಿ ಅಹಿಂಸಾ ಮಾರ್ಗದಲ್ಲೇ ಭಾರತ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಗಾಂಧೀಜಿ ಮತ್ತು ಶಾಸ್ತಿçಯವರ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕ ಎಂದು ತಿಳಿಸಿದರು.
ಶಿಕ್ಷಣ, ವಾಣಿಜ್ಯ ಮತ್ತು ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮಹಾತ್ಮಗಾಂಧಿ ಅವರ ಚಿಂತನೆಗಳು ಗ್ರಾಮ ಸ್ವರಾಜ್ಯದ ಕಲ್ಪನೆಗೆ ಪೂರಕವಾಗಿವೆ. ಗಾಂಧೀಜಿ ಅವರ ಆಶಯದಂತೆ ಗ್ರಾಮ¸ À್ವರಾಜ್ಯದ ಕನಸು ಇನ್ನೂ ನನಸಾಗದಿರುವುದು ವಿಷಾಧಕರ ಸಂಗತಿ ಎಂದರು.
ಮಾಜಿ ಸೈನಿಕ ಹಾಗೂ ರಾಜ್ಯಶಾಸ್ತç ಉಪನ್ಯಾಸಕ ಎಚ್.ಡಿ. ಸುರೇಶ್ ವಿಶ್ವಶಾಂತಿ ಕುರಿತು ಮಾತನಾಡಿ, ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್‌ಬಹದ್ದೂರ್ ಶಾಸ್ತಿçಯವರ ಆದರ್ಶಗಳು ಭವ್ಯ ಭಾರತದ ಪ್ರಗತಿಗೆ ಪೂರಕವಾದ ಅಂಶಗಳಾಗಿವೆ. ಭಾರತ ದೇಶ ಶಾಂತಿ ಪ್ರತಿಪಾದಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಶಾಂತಿಪ್ರಿಯವಾದ ಭಾರತ ದೇಶದ ಅಭಿವೃದ್ಧಿಗೆ ಈ ಮಹಾತ್ಮರ ಆದರ್ಶಗಳು ಮಹತ್ವದ ಪಾತ್ರ ವಹಿಸಿದ್ದು, ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕಾದಂತಹ ದೇಶಗಳು ಇಸ್ರೇಲ್‌ನಂತಹ ಯುದ್ಧಗಳನ್ನು ಬೆಂಬಲಿಸುವ ಮೂಲಕ ವಿಶ್ವಶಾಂತಿಯನ್ನು ಕದಡುವ ಕೆಲಸ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗೋಪಿಕೃಷ್ಣ, ಎಂ.ಎA. ಗಿರೀಶ್, ಸಿ.ಎನ್. ಕುಮಾರ್, ಎಚ್.ಆರ್. ಹರೀಶ್, ಎಂ.ಆರ್. ನಾಗರಾಜ್, ಎಂ.ಆರ್. ಕೇಶವಮೂರ್ತಿ, ಎಂ.ಆರ್.ಶ್ರೀಧರ್, ದೇವಿಚಂದ್, ಬಿ.ಎನ್. ವೆಂಕಟೇಶ್, ಶಶಿಪ್ರಸಾದ್, ಮನೋಜ್, ನೇತ್ರಾ ವೆಂಕಟೇಶ್, ನಜ್ಮಾ ಆಲಿ, ಸರಳ ಶ್ರೀಧರ್ ಮತ್ತಿತರರಿದ್ದರು.