ಮಸ್ಕಿ: ಪುರಾಣ ಪ್ರವಚನಗಳಲ್ಲಿ ಸುಖಿ ಜೀವನ, ಅಧ್ಯಾತ್ಮ ಜ್ಞಾನ ಹಾಗೂ ಜೀವನ ಮುಕ್ತಿಯ ಸನ್ಮಾರ್ಗ ಅಡಗಿದೆ ಎಂದು ದೇವಿ ಆರಾಧಕ ಅಲಬನೂರು ಮಾನಪ್ಪ ಆಚಾರ್ಯ ವಿಶ್ವಕರ್ಮ ಹೇಳಿದರು.
ಬಳಗಾನೂರಿನಲ್ಲಿ ಮೌನೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಅಜಾತ ನಾಗಲಿಂಗ ಮಹಾಸ್ವಾಮಿ ಶಿವಯೋಗಿಗಳ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಪ್ರತಿಯೊಬ್ಬರೂ ಶ್ರದ್ಧೆ-ಭಕ್ತಿಯಿಂದ ಪುರಾಣ ಪ್ರವಚನ ಕೇಳಬೇಕು. ಮಹಾತ್ಮರ ಮಾರ್ಗದರ್ಶನದ ಮೂಲ ಸಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಖಿ ಜೀವನ ಸಾಗಿಸಬೇಕು ಎಂದರು.
ನಾಡು-ನುಡಿ, ಸಂಸ್ಕೃತಿ, ಸಂಪ್ರದಾಯದ ಉಳಿವಿಗಾಗಿ ಆಚರಿಸುವ ಹಬ್ಬ, ಉತ್ಸವ ಹಾಗೂ ಇತರ ಕಾರ್ಯಕ್ರಮಗಳು ಒತ್ತಡದ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಕಷ್ಟಕರವಾದರೂ ಇಷ್ಟಪಟ್ಟು ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕೆಂದು ಮಾನಪ್ಪ ಆಚಾರ್ಯ ತಿಳಿಸಿದರು.