ಚಿಕ್ಕಮಗಳೂರಿನ ರತ್ನಗಿರಿ ಬೋರೆಯಲ್ಲಿ ಬಿಜೆಪಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ನಡೆಸಲಾಯಿತು. ಎಂ.ಆರ್.ದೇವರಾಜ ಶೆಟ್ಟಿ, ಸುಜಾತಾ ಶಿವಕುಮಾರ್, ಪುಷ್ಪರಾಜ್, ಕೋಟೆ ರಂಗನಾಥ್, ಮಧುಕುಮಾರ್ ರಾಜ್ ಅರಸ್, ನರೇಂದ್ರ, ಸಂತೋಷ್ ಕೋಟ್ಯಾನ್, ಜಯವರ್ಧನ್ ಮತ್ತಿತರರಿದ್ದರು. 
ಜಿಲ್ಲೆ

ಸಮಾಜ ಸೇವೆಗೆ ಜೀವನ ಮುಡುಪಿಟ್ಟ ಮಹಾತ್ಮ

ಚಿಕ್ಕಮಗಳೂರು: ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡ ಮಹಾತ್ಮರು ಗಾಂಧೀಜಿ. ಆದ್ದರಿಂದ ಅವರನ್ನು ಮಹಾತ್ಮ ಗಾಂಧಿ ಎಂದು ಕರೆಯಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಅರ್.ದೇವರಾಜ್ ಶೆಟ್ಟಿ ತಿಳಿಸಿದರು.

ನಗರದ ರತ್ನಗಿರಿ ಬೋರೆಯಲ್ಲಿ ಬುಧವಾರ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ ೧೫೫ನೇ ಜನ್ಮದಿನಾಚಾರಣೆ ಹಾಗೂ ಲಾಲ್‌ಬಹುದ್ದೂರ್ ಶಾಸ್ತಿç ರವರ ೧೨೧ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಬ್ಬರು ಮಹಾತ್ಮರ ಜಯಂತಿಯನ್ನು ಭಾರತೀಯ ಜನತಾ ಪಕ್ಷದ ವತಿಯಿಂದ ಆಚರಣೆ ಮಾಡಲಾಗುತ್ತಿದೆ. ಭಾರತ ದೇಶದಲ್ಲಿ ಮಹಾತ್ಮ ಎಂದು ಕರೆಯಲ್ಪಡುವ ಮತ್ತೋರ್ವ ವ್ಯಕ್ತಿಯಾರು ಇಲ್ಲ. ಅವರನ್ನು ಮಹಾತ್ಮ, ರಾಷ್ಟçಪಿತ ಎಂಬ ಅನೇಕ ಹೆಸರಿನಿಂದ ಕರೆಯಲಾಗುತ್ತಿದೆ ಎಂದು ಹೇಳಿದರು.
ಸಾತಂತ್ರö್ಯದ ಹೋರಾಟ ಸಂದರ್ಭದಲ್ಲಿ ಬಹಳಷ್ಟು ಹಿಂಸಾತ್ಮಕ ಹೋರಾಟ ನಡೆಯುತ್ತಿತ್ತು. ಲಕ್ಷಾಂತರ ಭಾರತೀಯರು ತಮ್ಮ ಜೀವವನ್ನು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಅಂತಹ ದಿನಗಳಲ್ಲಿ ಹಿಂಸಾತ್ಮಕ ಹೋರಾಟದಿಂದ ಬ್ರಿಟೀಷರನ್ನು ಸೋಲಿಸಿ ಜಯಗೊಳಿಸಲು ಸಾಧ್ಯವಿಲ್ಲ. ಅಹಿಂಸಾತ್ಮಕ ಹೋರಾಟವನ್ನು ಮಾಡುತ್ತೇನೆಂದು ಉಪ್ಪಿನ ಸತ್ಯಾಗ್ರಹ ಮಾಡುವ ಮೂಲಕ ದೇಶಕ್ಕೆ ಸ್ವಾತಂತ್ರö್ಯ ಕೊಡಿಸುವಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಣ್ಣಿಸಿದರು.
ಗಾಂಧೀಜಿಯವರ ಮಾರ್ಗದರ್ಶನದಲ್ಲಿ ನಡೆದು ಬಂದಿರುವ ನಾವೆಲ್ಲರು ಸಮಾಜಕ್ಕಾಗಿ ಏನಾದರು ಮಾಡಬೇಕೆಂಬ ಉz್ದೆÃಶದಿಂದ, ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿz್ದÉÃವೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂದು ಪಕ್ಷದ ಹಿರಿಯರು ನಮಗೆಲ್ಲ ಹೇಳಿಕೊಟ್ಟಿರುವ ಪಾಠ ಎಂದರು.
ಭಾರತೀಯ ಜನತಾ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುತ್ತಿದ್ದಾರೆ. ನಮ್ಮ ಮರಣದ ನಂತರ ನಮ್ಮ ಶ್ರೀಮಂತಿಕೆಯಿAದ ಹೆಸರನ್ನು ಉಳಿಸಲು ಸಾಧ್ಯವಿಲ್ಲ. ಬದಲಾಗಿ ಸಮಾಜಕ್ಕೆ ನಾವು ಕೊಡುವ ಕೊಡುಗೆಯಿಂದ ನಮ್ಮ ಕಾಲದ ನಂತರವು ಸಮಾಜವು ನಮ್ಮನ್ನು ನೆನಪು ಮಾಡಿಕೊಳ್ಳುತ್ತದೆ. ಅದೇ ರೀತಿಯಲ್ಲಿ ೧೫೫ ವರ್ಷಗಳ ನಂತರವು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತಿç ಅವರನ್ನು ನೆನಪು ಮಾಡಿಕೊಳ್ಳುತ್ತಿz್ದÉÃವೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಇಂದು ಮಹಾತ್ಮಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತಿç ರವರ ಜನ್ಮ ದಿನಾಚರಣೆ ಮಾಡಲಾಗುತ್ತಿದೆ. ಗಾಂಧೀಜಿರವರನ್ನು ಮಹಾತ್ಮ ಎಂದು ಕರೆಯಲು ಅವರ ಅನೇಕ ಸಮಾಜ ಸೇವೆ ಕಾರಣ. ದೇಶಕ್ಕೆ ಸ್ವಾತಂತ್ರö್ಯ ತಂದುಕೊಡಲು ಉಪ್ಪಿನ ಸತ್ಯಾಗ್ರಹದ ಮೂಲಕ ಅಹಿಂಸಾ ಚಳುವಳಿ ಘೋಷಣೆ ಮಾಡಿದ್ದರು ಎಂದರು.
ವಿದ್ಯಾರ್ಥಿ ಜೀವನದಲ್ಲಿ ಹರಿಶ್ಚಂದ್ರ ನಾಟಕ ನೋಡಿದ ನಂತರ ತಮ್ಮ ಜೀವನ ಪರಿವರ್ತನೆ ಮಾಡಿಕೊಂಡ ಅವರು ಅನೇಕ ಜನರಿಗೆ ಸ್ಪೂರ್ತಿ ಆಗಿದ್ದಾರೆ. ಸ್ವಾತಂತ್ರö್ಯ ದೊರೆತ ಅಂದಿನಿAದ ಇಲ್ಲಿಯವರೆಗೂ ಸಮಾಜ ಸೇವೆ, ಸ್ವಚ್ಚತೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅರಿವನ್ನು ಮೂಡಿಸಿದ್ದಾರೆ ಎಂದರು.
ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವವರು ಅಕ್ಟೋಬರ್ ೨. ೧೮೬೯ರಂದು ಗುಜರಾತ್‌ನ ಪೋರ್‌ಬಂದರ್‌ನಲ್ಲಿ ಜನಿಸಿದರು. ತಂದೆ ಕರಮಚಂದ್‌ಗಾAಧಿ, ತಾಯಿ ಪುತಲೀಬಾಯಿ. ಬಾಲ್ಯದಲ್ಲಿ ಎಲ್ಲರಂತೆ ಆಡಿಬೆಳೆದ ಅವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ತಮ್ಮ ಜೀವನವನ್ನು ನಡೆಸಿಕೊಂಡು ಬಂದವರು ಎಂದು ಹೇಳಿದರು.
ಗಾಂಧೀಜಿ ಅವರು ಸ್ವಾತಂತ್ರö್ಯಕ್ಕಾಗಿ ಮಾಡಿದ ಹೋರಾಟ ಅವಿಸ್ಮರಣೀಯ. ಅವರನ್ನು ಬಾಪು, ಮಹಾತ್ಮಗಾಂಧಿ, ರಾಷ್ಟçಪಿತಾ ಎಂಬ ಹಲವಾರು ಹೆಸರುಗಳಿಂದ ಕರೆಯಲಾಗುತ್ತಿದೆ. ಅಂತಹ ಮಹಾನ್ ವ್ಯಕ್ತಿಯನ್ನು ನೆನಪು ಮಾಡಿಕೊಂಡು ದೇಶದಾದ್ಯಂತ ಗಾಂಧಿ ಜಯಂತಿಯನ್ನು ವಿಜೃಂಭಣೆಯಿAದ ಆಚರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನರೇಂದ್ರ, ಕೋಟೆ ರಂಗನಾಥ್, ಮಧುಕುಮಾರ್ ರಾಜ್ ಅರಸ್, ಜೇಮ್ಸ್, ಓಬಿಸಿ ಮೋರ್ಚಾಧ್ಯಕ್ಷ ಜಯವರ್ಧನ್, ಸಂತೋಷ್ ಕೋಟ್ಯಾನ್, ಜಸಂತಾ ಅನಿಲ್ ಕುಮಾರ್, ಜೀವನ್ ಕೋಟೆ, ಕಬೀರ್, ಕೌಶಿಕ್, ವೆಂಕಟೇಶ್ ರಾಜ್ ಅರಸ್, ಸತೀಶ್, ಕೆ.ಪಿ.ಮಧು, ಪ್ರದೀಪ್ ಕೋಟೆ, ಯಶೋಧಾ ಮತ್ತಿತರರಿದ್ದರು.