ಜಿಲ್ಲೆ

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ಸೌಮ್ಯ ಆರ್

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದಂಗವಾಗಿ ಬುಧವಾರ ಬೆಳಗ್ಗೆ ಗಣಪತಿ ಹೋಮ, ಬೆಳಗಿನ ಪೂಜೆ, ಶ್ರೀ ಉದನೇಶ್ವರ ಭಜನಾ ಸಂಘ ನೇತೃತ್ವದಲ್ಲಿ ವಿವಿಧ ಭಜನಾ ಸಂಘಗಳಿಂದ ಏಕಾಹ ಭಜನೆ, ಶತರುದ್ರಾಭಿಷೇಕ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು.

ಸಂಜೆ ದೀಪಾರಾಧನೆ, ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ ನೃತ್ಯ ಕಾರ್ಯಕ್ರಮ, ಮುದ್ದುಕೃಷ್ಣ ಬಳಗ ಚುಕ್ಕಿನಡ್ಕ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು. ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ ಪೆರಡಾಲ ಮತ್ತು ಆಹ್ವಾನಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಕೊಲ್ಲೂರು ಕ್ಷೇತ್ರ ಮಹಾತ್ಮೆ, ಶ್ರೀ ದೇವರ ಬಲಿ ಉತ್ಸವ, ನವಕಾಭಿಷೇಕ, ವಸಂತಪೂಜೆ, ಶ್ರೀಭೂತಬಲಿ ಜರುಗಿತು.

ಗುರುವಾರ ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ ರಾಜಾಂಗಣ ಪ್ರಸಾದ, ಮಧ್ಯಾಹ್ನ ಶ್ರೀ ಪಿಲಿಚಾಮುಂಡಿ ದೈವದ ಕೋಲ, ಅರಸಿನ ಹುಡಿ, ಪ್ರಸಾದ ಭೋಜನ ನಡೆಯಲಿದೆ.