ವಿಜಯಪುರದ ಕೋರಳ್ಳಿ ಚೌಕ್​ನಲ್ಲಿ ಮಹಾಶಕ್ತಿ ಮಂದಿರದಲ್ಲಿ ನಾಡದೇವಿಯ ಟಸ್ಥಾಪನೆ ಕಾರ್ಯಕ್ರಮ ನಡೆಯಿತು. ಮಹಾದೇವಿ ಕೋರಳ್ಳಿ, ವೀಣಾ ಕೋರಳ್ಳಿ, ಗಂಗವ್ವ ಮನಗೂಳಿ ಮತ್ತಿತರರಿದ್ದಾರೆ. 
ಜಿಲ್ಲೆ

ಗಂಗಾಧರ ಕೋರಳ್ಳಿ ಸಂಸ್ಥಾಪಿತ ಮಹಾಶಕ್ತಿ ಟಸ್ಥಾಪನೆ

ವಿಜಯಪುರ : ನಗರದ ಇಂಡಿ ರಸ್ತೆಯ ಕೋರಳ್ಳಿ ಚೌಕ್​ನಲ್ಲಿರುವ ಮಹಾಶಕ್ತಿ ಮಂದಿರದಲ್ಲಿ ಮಹಾಶಕ್ತಿ ದಸರಾ ಉತ್ಸವ ಸಮಿತಿಯಿಂದ ಗುರುವಾರ ದಸರಾ ಹಬ್ಬದ ಹಿನ್ನೆಲೆ ಹಲವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಾಡದೇವಿ ಟಸ್ಥಾಪನೆ ಕಾರ್ಯಕ್ರಮ ಭಕ್ತಿ ಶ್ರದ್ಧೆಯಿಂದ ನಡೆಯಿತು.

ಸಮಿತಿ ವತಿಯಿಂದ ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷ ನೀಲಕಂಠ ಕೋರಳ್ಳಿ, ಮಹಾದೇವಿ ಕೋರಳ್ಳಿ, ವೀಣಾ ಕೋರಳ್ಳಿ, ಗಂಗವ್ವ ಮನಗೂಳಿ, ಕವಿತಾ ಪ್ಯಾಟಿ, ಮಂಗಲಾ ಹಿರೊಳ್ಳಿ, ಶಾಂತಾ ಬಿದರಿ, ಮಹಾಂನಂದ ಅನಂತಪುರ, ಕಸ್ತೂರಿ ಅನಂತಪುರ, ಶಾಂತಾ ಕೋರಿ, ಪ್ರತಿಭಾ ಗೊಳಸಾರ, ಅನುಷ್ಕಾ ಗೊಳಸಾರ, ಲಿಂಗಣ್ಣ ಮನಗೂಳಿ, ರಾಹುಲ ಮೆಳ್ಳಿ, ಅಭಿಷೇಕ ಬಿ., ಮತ್ತಿತರರಿದ್ದರು.