ಕಾರಟಗಿಯಲ್ಲಿ ರಡ್ಡಿ ಸಮುದಾಯದ ಪ್ರಮುಖರು ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಸಮುದಾಯದ ತಾಲೂಕು ಅಧ್ಯಕ್ಷ ರುದ್ರಗೌಡ ಪಾಟೀಲ್ ನಂದಿಹಳ್ಳಿ, ಮುಖಂಡರಾದ ಕೆ.ಯಂಕಾರಡ್ಡೆಪ್ಪ, ಜಿ. ತಿಮ್ಮನಗೌಡ, ಕೆ. ಸಿದ್ಧನಗೌಡ ಶರಣಪ್ಪ ಬಾವಿ, ಬಸವರಾಜಪ್ಪ ಸಾಹುಕಾರ ಕೊಟ್ನೆಕಲ್, ಶರಣೇಗೌಡ ಕೊಟ್ನೆಕಲ್, ಭೂಪಾಲರಡ್ಡಿ ಇದ್ದರು.The concept of the welfare state will be weakened. 
ಜಿಲ್ಲೆ

ಮಹಾಸಾಧ್ವಿ ಜಯಂತ್ಯುತ್ಸವ 24ಕ್ಕೆ

ರುದ್ರಪ್ಪ ವಾಲಿ

ಕಾರಟಗಿ: ಪಟ್ಟಣದ ಸಿದ್ಧೇಶ್ವರ ರಂಗಮಂದಿರದಲ್ಲಿ ವೇಮ-ಹೇಮ-ರಡ್ಡಿಬಲ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮೇ 24ರಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ತಾಲೂಕು ಅಧ್ಯಕ್ಷ ರುದ್ರಗೌಡ ಪಾಟೀಲ್ ನಂದಿಹಳ್ಳಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ ಎಪಿಎಂಸಿಯಿಂದ ಕುಂಭಮೇಳ, ಡೊಳ್ಳು ಹಾಗೂ ವಿವಿಧ ವಾದ್ಯ ವೃಂದದೊಂದಿಗೆ ಕನಕದಾಸ ವೃತ್ತದ ಮೂಲಕ ಸಿದ್ಧೇಶ್ವರ ರಂಗ ಮಂದಿರದವರೆಗೆ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ತಾಲೂಕಿನ ರಡ್ಡಿ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಜತೆಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿ ಇತರ ಪ್ರತಿಷ್ಠಿತ ಪ್ರಶಸ್ತಿ ಪಡೆದ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು.

ಹರಿಹರ ಎರಹೊಸಳ್ಳಿಯ ಹೇಮ-ವೇಮ ಸದ್ಭೋಧನಾ ವಿದ್ಯಾಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬೂದಗುಂಪಾದ ಕೊಟ್ಟೂರೇಶ್ವರ ಸಂಸ್ಥಾನ ಶಾಖಾ ಮಠದ ಸಿದ್ದೇಶ್ವರ ಸ್ವಾಮೀಜಿ, ಕಾರಟಗಿಯ ಹಿರೇಮಠದ ಮರುಳ ಸಿದ್ಧಯ್ಯ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಡ್ಡಿ ಸಮುದಾಯದ ತಾಲೂಕು ಅಧ್ಯಕ್ಷ ರುದ್ರಗೌಡ ಪಾಟೀಲ್ ನಂದಿಹಳ್ಳಿ ಅಧ್ಯಕ್ಷತೆ ವಹಿಸುವರು. ಕಜ್ಜಿಡೋಣಿಯ ಕೃಷ್ಣಾನಂದ ಶಾಸಿ ವಿಶೇಷ ಉಪನ್ಯಾಸ ಹಾಗೂ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನಮನಗೌಡ ಬೆಳಗುರ್ಕಿ ಉಪನ್ಯಾಸ ನೀಡಲಿದ್ದಾರೆ ಎಂದರು.