ಕಮಲನಗರದ ತಹಸಿಲ್ ಕಚೇರಿ ಆವರಣದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಎಡಿ ಹಣಮಂತರಾಯ ಕೌಟಗೆ, ಉಪ ತಹಸೀಲ್ದಾರ್ ಗೋಪಾಲಕೃಷ್ಣ, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಶಿರಸ್ತೇದಾರ ಅಶ್ವಿನ್ ಪಾಟೀಲ್, ಪ್ರವೀಣ ಬಿರಾದಾರ, ಜಿಪಂ ಮಾಜಿ ಸದಸ್ಯ ಧೂಳಪ್ಪ ಸುರಂಗೆ, ಲಕ್ಷ್ಮಣ ಗಾದಗೆ, ಬಾಲಾಜಿ ಟೋಕರೆ, ತಾನಾಜಿ ಬಳಕಟ್ಟೆ, ಸಂತೋಷ ನಿಟ್ಟೂರೆ ಇತರರಿದ್ದರು. 
ಜಿಲ್ಲೆ

ಮಹರ್ಷಿ ವಾಲ್ಮೀಕಿ ಚಿಂತನೆ ಲೋಕಮಾನ್ಯ

ಕಮಲನಗರ: ಕ್ರೌರ್ಯದ ಮಾರ್ಗ ತೊರೆದು, ಕಾರುಣ್ಯದ ಮಾರ್ಗದಲ್ಲಿ ನಡೆಯುವಂತೆ ಬೋಧಿಸಿದ ವಾಲ್ಮೀಕಿ ಮಹರ್ಷಿಗಳ ಚಿಂತನೆ ಲೋಕಮಾನ್ಯವಾಗಿದೆ. ಶಾಸ್ತ್ರದ ಜ್ಞಾನ ಮತ್ತು ಶಸ್ತ್ರದ ಶಕ್ತಿ ಒಂದೆಡೆ ಮೇಳೈಸಿದ ಶ್ರೀರಾಮನ ಚರಿತೆಯನ್ನು ರಾಮಾಯಣ ಗ್ರಂಥದ ಮೂಲಕ ಕಟ್ಟಿ ಕೊಟ್ಟ ಮಹಾತ್ಮರ ಆದರ್ಶಗಳು ನಮಗೆ ದಿವ್ಯ ಬೆಳಕಾಗಿವೆ ಎಂದು ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ಕುಟುಂಬ ಧರ್ಮಕ್ಕಿಂತ ರಾಜ ಧರ್ಮ ಪಾಲನೆಯು ಶ್ರೇಷ್ಠವಾದದ್ದು ಎಂದು ಜಗತ್ತಿಗೆ ಸಾರಿದ್ದಾರೆ. ನಾವು ದುಡಿದು ತಿನ್ನುವ ಅನ್ನವು ಯಾರದ್ದೋ ಕಣ್ಣೀರಿನ ಫಲವಾಗಿರಬಾರದು ಎಂಬ ಮಹತ್ವದ ಸಂದೇಶವನ್ನು ಹಾಗೂ ಕ್ರೌರ್ಯಕ್ಕಿಂತ ಕಾರುಣ್ಯವೇ ಶ್ರೇಷ್ಠ ಎಂಬಂತಹ ಸಾರ್ವಕಾಲಿಕ ಸತ್ಯವನ್ನು ಜಗತ್ತಿಗೆ ನೀಡಿದ್ದಾರೆ ಎಂದರು.

ತಾಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ ಮಾತನಾಡಿ, ಪ್ರಚೇತಸ ಎಂಬ ನಾಮವನ್ನು ಹೊಂದಿದ್ದ ಬೇಡನೊಬ್ಬನು ತನ್ನ ಅರಿವಿನ ಜ್ಞಾನದಿಂದ, ಮಹರ್ಷಿಯಾಗಿ, ರಾಮ ನಾಮವನ್ನು ಪಠಿಸಿ ಪುನೀತನಾಗಿ ರಾಮಾಯಣದಂತಹ ಮೇರುಗ್ರಂಥವನ್ನು ನೀಡಿದ್ದಾರೆ. ಇಂತಹ ಮಹಾನ್ ಗ್ರಂಥ ಓದುವ ಮೂಲಕ ನಾವೂ ಸದ್ಗುಣಿಗಳಾಗಿ ಬಾಳಬೇಕು. ವಾಲ್ಮೀಕಿ ತೋರಿದ ಕಾರುಣ್ಯದ ದಾರಿಯಲ್ಲಿ ಸಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಉಪ ತಹಸೀಲ್ದಾರ್ ಗೋಪಾಲಕೃಷ್ಣ, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಶಿರಸ್ತೆದಾರ ಅಶ್ವಿನ್ ಪಾಟೀಲ್, ಪ್ರವೀಣ ಬಿರಾದಾರ, ವಿಕ್ರಮ ಪಾಂಚಾಳ, ಮಲ್ಲಪ್ಪಾ ಬಿರಾದಾರ, ಪ್ರಶಾಂತ ಸೋರಗಾವೆ, ಮಾಣಿಕ ಪಾಟೀಲ್, ಜಿಪಂ ಮಾಜಿ ಸದಸ್ಯ ಧೂಳಪ್ಪ ಸುರಂಗೆ, ಲಕ್ಷ್ಮಣ ಗಾದಗೆ, ಬಾಲಾಜಿ ಟೋಕರೆ, ತಾನಾಜಿ ಬಳಕಟ್ಟೆ, ಸಂತೋಷ ನಿಟ್ಟೂರೆ, ಉಮಾಕಾಂತ ಬಳಕಟ್ಟೆ, ಶ್ರೀಕಾಂತ, ಝರೆಪ್ಪ ಇತರರಿದ್ದರು.