ಮಹಾಲಿಂಗಪುರ ಪುರಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸದಸ್ಯ ಶೇಖರ ಅಂಗಡಿ ಇತರರಿದ್ದರು. 
ಜಿಲ್ಲೆ

ಮಹರ್ಷಿ ವಾಲ್ಮೀಕಿ ಮನುಕುಲದ ಮಹಾ ದಾರ್ಶನಿಕ

ಮಹಾಲಿಂಗಪುರ: ರಾಮಾಯಣ ಮಹಾಕಾವ್ಯ ರಚಿಸಿ ಜಗತ್ತಿಗೆ ಭಾರತೀಯ ಸಂಸ್ಕೃತಿ ತೋರಿಸಿದ ಮಹರ್ಷಿ ವಾಲ್ಮೀಕಿ ಇಡೀ ಮನುಕುಲದ ಮಹಾನ್ ಸಂತ ದಾರ್ಶನಿಕ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.

ಪುರಸಭೆಯಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸದಸ್ಯ ಶೇಖರ ಅಂಗಡಿ, ಪಂಚಗ್ಯಾರಂಟಿಗಳ ತಾಲೂಕು ಅಧ್ಯಕ್ಷ ಬಲವಂತಗೌಡ ಪಾಟೀಲ ಮುಖಂಡರಾದ ರಾಜೇಶ ಬಾವಿಕಟ್ಟಿ, ಕಿರುತೆರೆ ಕಲಾವಿದ ದಾನಪ್ಪ ಮೂಡಲಗಿ, ಜಿ.ಎಸ್. ಮಠಪತಿ, ಲಕ್ಷ್ಮಣ ಮಾಂಗ, ಮಹಾದೇವ ಕದ್ದಿಮನಿ, ಸಂಗಮೇಶ ಹಿಡಕಲ, ಶ್ರೀಶೈಲಪ್ಪ ರೊಡ್ಡಪ್ಪನವರ, ಎಂ.ಕೆ. ದಳವಾಯಿ, ಪರಶುರಾಮ ಮುಕೇನ್ನವರ, ಎಸ್. ಎನ್. ಪಾಟೀಲ, ಎಂ. ಎಂ. ಮುಗಳಖೋಡ, ಸಿ. ಎಸ್. ಮಠಪತಿ, ಸದಾಶಿವ ಕತ್ತಿ, ಸದಾಶಿವ ಮಾವಿನಹಿಂಡಿ, ರಾಮು ಮಾಂಗ, ಮಾನಿಂಗ ಮಾಂಗ, ಲಕ್ಷ್ಮೀ ಪರೀಟ್ ಇದ್ದರು.