ಜಿಲ್ಲೆ

ಮಹರ್ಷಿ ವಾಲ್ಮೀಕಿ ಜಯಂತಿ : ಮೈಸೂರಿನಲ್ಲಿ ಸಸಿ ನೆಟ್ಟು ಆಚರಣೆ

ಮೈಸೂರು: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಯಣ ಗ್ರಂಥದಲ್ಲಿ ಅಡಕವಾಗಿರುವ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಜನರು ಅಳವಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಹೇಳಿದರು.

ನಗರದ ನ್ಯಾಯಾಲಯ ಮುಂಭಾಗದ ಉದ್ಯಾನದಲ್ಲಿ ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.

ಆದಿಕವಿ ಮಹರ್ಷಿ ವಾಲ್ಮಿಕಿ ಅವರ ಜೀವನ ಸಂದೇಶಗಳು ಬದುಕಿಗೆ ಪ್ರೆರಣಾತ್ಮಕ ಮತ್ತು ಪ್ರಭಾವಶಾಲಿಯಾಗಿದ್ದು, ಅವುಗಳನ್ನು ಸಣ್ಣ ಕೈಪಿಡಿ ರೂಪದಲ್ಲಿ ಪ್ರಕಟಿಸಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು

ಈ ಸಂದರ್ಭ ವಿವಿಧ ಸಂಘಟನೆಗಳ ಪ್ರಮುಖರಾದ ಜಿ.ರಾಘವೇಂದ್ರ, ಪಾಂಡವಪುರ ದಿನೇಶ್, ರಮೇಶ್, ಲೋಕೇಶ್, ಮೋಹನ್ ಕುಮಾರ್, ದಿನೇಶ್, ಪರಿಸರ ಬಳಗದ ಕೃಷ್ಣಪ್ಪ, ಎಸ್.ಎನ್. ರಾಜೇಶ್, ರವಿಚಂದ್ರ, ನಿತೀಶ್, ಕೆ.ಜಿ. ಕೊಪ್ಪಲು ಗುಂಡಪ್ಪ ಇದ್ದರು.