ಜಿಲ್ಲೆ

ವೇದವ್ಯಾಸ ಮಹರ್ಷಿ ಜಯಂತ್ಯುತ್ಸವ

ಶಿವರಾಜ.ಎಂ

ಜಡಿಗೇನಹಳ್ಳಿ: ಹೊಸಕೋಟೆ ಕಾಲೇಜು ರಸ್ತೆ ಬಸವೇಶ್ವರ ನಗರ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಗುರು ಹುಣ್ಣಿಮೆ ಪ್ರಯುಕ್ತ ಶುಕ್ರವಾರ ಭಗವಾನ್ ಶ್ರೀ ವೇದವ್ಯಾಸ ಮಹರ್ಷಿ ಅವರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು.

ಮಹರ್ಷಿ ಅವರು ದೈವ ಸ್ವರೂಪರಾಗಿದ್ದು 18 ಪರ್ವಗಳ ಮಹಾಭಾರತ ಮಹಾಕಾವ್ಯ ರಚಿಸಿದ್ದರು ಮತ್ತು 18 ಪುರಾಣಗಳನ್ನು 4 ವೇದಗಳನ್ನು ರಚಿಸಿ ಮಾನವ ಸಂಕುಲಕ್ಕೆ ಧರ್ಮ ಮಾರ್ಗ ದ ಜ್ಞಾನ ಸುಧೆ ಹರಿಸಿ ಲೋಕಕ್ಕೆ ಸದ್ಬೋಧನೆ ನೀಡಿದ್ದಾರೆ ಎಂದು ವಿಶ್ವ ಪಾಂಡವರ ಸೇನೆ ರಾಜ್ಯಾಧ್ಯಕ್ಷ ಮತ್ತು ಶ್ರೀ ಪಾಂಡವಾಸ್ ಫೌಂಡೇಶನ್ ಅಧ್ಯಕ್ಷ ದೇವಾರ್ಜುನ ಹೇಳಿದರು.

ಗುರು ಪರಂಪರೆ ಬಹಳ ಪ್ರಾಚೀನ ಕಾಲದಿಂದಲೂ ನಡೆದು ಬಂದಿದ್ದು ವ್ಯಾಸ ಮಹರ್ಷಿಗಳು ಗುರುಗಳ ಸ್ಥಾನವನ್ನು ತುಂಬಿದ್ದಾರೆ ಎಂದು ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಹೇಳಿದರು.

ಮಹರ್ಷಿ ಜಯಂತಿ ಯೊಂದಿಗೆ ಅವರ ಮಹತ್ವ, ಸಾಧನೆ ದೂರದೃಷ್ಟಿ, ತತ್ವ ಸಿದ್ದಾಂತ ಅವರು ರಚಿಸಿದ ವೇದ ಪುರಾಣ ಇತ್ಯಾದಿ ಧರ್ಮ ಗ್ರಂಥಗಳ ಬಗ್ಗೆ ಕೇಳಿ ಬಹಳ ಅನಂದವಾಗಿದೆ ಇದು ಇಷ್ಟಕ್ಕೆ ಸೀಮಿತವಾಗದೆ ಸರ್ವರಿಗೂ ಜ್ಞಾನ ಲಭ್ಯವಾಗಲಿ ಎಂದು ಸಾಯಿ ಮಂದಿರದ ಧರ್ಮಾಧಿಕಾರಿ ವೆಂಕಟೇಶ್ ಅವರು ಆಶಿಸಿದರು.