ಜಿಲ್ಲೆ

Maharashtra elections result ಸುನೀಲ ಹೆಗಡೆ ಉಸ್ತುವಾರಿ ಕ್ಷೇತ್ರದಲ್ಲಿ 78 ಸಾವಿರ ಮತಗಳಿಂದ ಗೆಲುವು ಕಂಡ ಅಭ್ಯರ್ಥಿ

Uttara Kannada - Subash Hegde
ಹಳಿಯಾಳ: Maharashtra elections result  ಮಾಜಿ ಶಾಸಕ‌ ಸುನಿಲ್ ಹೆಗಡೆ ಅವರು ಚುನಾವಣಾ ಉಸ್ತುವಾರಿ ಆಗಿ ನೇಮಕ ಗೊಂಡಿದ್ದ  ಮಹಾರಾಷ್ಟ್ರದ  ಸಾಂಗ್ಲಿ ಜಿಲ್ಲೆಯ ಕ್ಷೇತ್ರದ ಬಿಜೆಪಿ ಅಭೈರ್ಥಿ ಭಾರಿ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.
ವೀಟಾ, ಖಾನಾಪುರ ಹಾಗೂ ಅಟವಾಡಿ ತಾಲೂಕುಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರದ  ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣದ ಶಿವಸೇನೆಯ ಅಭ್ಯರ್ಥಿ ಸುಹಾಸ ಅನಿಲ್ ಬಾಬರ್   ಸುಮಾರು  78,177 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಸುನೀಲ್ ಹೆಗಡೆ ಅವರ ಪರಿಶ್ರಮಕ್ಕೆ ಬಿಜೆಪಿ ಹೈಕಮಾಂಡ ಮೆಚ್ಚುಗೆ ವ್ಯಕ್ತಪಡಿಸಿದೆ.
ಬಿಜೆಪಿ ಪಕ್ಷದ ರಾಜ್ಯ ಕಾರ್ಯಾಕಾರಿಣಿ ಸಮಿತಿ ಸದಸ್ಯರು ಆಗಿರುವ ಮಾಜಿ ಶಾಸಕ ಸುನಿಲ್ ಹೆಗಡೆ ಅವರಿಗೆ ಈ  ಹಿಂದೆ ಗೋವಾ ರಾಜ್ಯದ ಕಾನಕೋನ ವಿಧಾನಸಭಾ ಚುನಾವಣೆ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಆಗಲೂ  ಕೂಡ  ಅಲ್ಲಿನ ಅಭ್ಯರ್ಥಿ ಈಗಿನ ಗೋವಾ ರಾಜ್ಯದ ವಿಧಾನ ಸಭಾಧ್ಯಕ್ಷ ರಮೇಶ ತಾವಡ್ಕರ ಅವರ ಗೆಲುವಿನಲ್ಲಿ ಸುನಿಲ್ ಹೆಗಡೆ ತಂತ್ರಗಾರಿಕೆ ಫಲಪ್ರದವಾಗಿತ್ತು.
ಅಂದು ಕೂಡ ಹೈಕಮಾಂಡನಿಂದ ಮೆಚ್ಚುಗೆ ಗಳಿಸಿದ್ದ‌ ಸುನಿಲ್ ಹೆಗಡೆ ಇಂದು ಮಹಾರಾಷ್ಟ್ರ ಚುನಾವಣೆ Maharashtra elections result ಯಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತಮ್ಮ ಅಭ್ಯರ್ಥಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅವರ ಉಸ್ತುವಾರಿಯಲ್ಲಿನ 2 ನೇ ಗೆಲುವಾಗಿದೆ.
ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡು  ಕಳೆದ ಒಂದು ತಿಂಗಳಿಂದ  ಅಭ್ಯರ್ಥಿ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಗಲಿರುಳು ಶ್ರಮಿಸಿ ಇಂದಿನ ಈ ದಿನವನ್ನು ಅದ್ದೂರಿಯಾಗಿ ಸಂಭ್ರಮಿಸಲು ಅಲ್ಲಿನ ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆಂದು  ಹಳಿಯಾಳ ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ‌, ಉದಯ ಹೂಲಿ, ಚಂದ್ರಕಾಂತ ಕಮ್ಮಾರ‌ ತಿಳಿಸಿದ್ದಾರೆ.

Maharashtra elections result ವಿಜಯೋತ್ಸವದಲ್ಲಿ ಭಾಗಿಯಾಗಲು ಕರೆ

ಇನ್ನೂ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಮೈತ್ರಿ ಕೂಟದ ಶಿವಸೇನೆ ಅಭ್ಯರ್ಥಿ ಸುಹಾಸ ಅನಿಲ್ ಬಾಬರ್ ಅವರು ಮಾಜಿ ಶಾಸಕರಿಗೆ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ನನ್ನ ಗೆಲುವಿಗೆ ನೀವೇ ಪ್ರಮುಖ ಕಾರಣ. ಇಲ್ಲಿನ ಸ್ಥಳಿಯ ಮತದಾರರಿಗೆ ಕೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿ ಕಾರ್ಯಗಳು, ಯೋಜನೆ ಹಾಗೂ ಪ್ರಣಾಳಿಕೆಗಳನ್ನು ತಿಳಿಸಿ ನಮ್ಮ ಗೆಲುವಿಗೆ ಕಾರಣರಾಗಿದ್ದೀರಿ ಎಂದು ತಿಳಿಸಿ, ನಮ್ಮ ಇಂದಿನ ಈ ವಿಜಯೋತ್ಸವದಲ್ಲಿ ತಾವುಗಳು ತಪ್ಪದೇ ಪಾಲ್ಗೊಳ್ಳಬೇಕು, ನನ್ನ ಈ ಗೆಲುವಿಗೆ ತಾವೇ ಪ್ರಮುಖ ಕಾರಣ ಎಂದು ಹರ್ಷ ವ್ಯಕ್ತಪಡಿಸಿದ್ದಾರೆಂದು ಹಳಿಯಾಳ ತಾಲೂಕಾ ಬಿಜೆಪಿ ಅಧ್ಯಕ್ಷ ವಿಠ್ಠಲ ಸಿದ್ದನ್ನವರ ತಿಳಸಿದ್ದಾರೆ.