ಹುಬ್ಬಳ್ಳಿ: ಇಲ್ಲಿಯ ರಾಜಪೂತ ಸಮಾಜದ ವತಿಯಿಂದ ಶ್ರೀ ಮಹಾರಾಣಾ ಪ್ರತಾಪ್ ಸಿಂಹರ 485ನೇ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಎಚ್.ಎನ್. ನಂದಕುಮಾರ, ಅಪ್ರತಿಮ ವೀರ, ಸ್ವಾಭಿಮಾನಿ, ಶೌರ್ಯದ ಪರಾಕಾಷ್ಠೆ ಮೆರೆದ ಪ್ರತಾಪ್ ಸಿಂಹ ಅವರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಸಮಗ್ರ ಹಿಂದೂ ಸಮಾಜದ ಏಳ್ಗೆಗಾಗಿ ಶ್ರಮಿಸಿದರು. ಆದರೆ, ಸ್ವಾತಂತ್ರ್ಯದ ನಂತರ ಮಹಾರಾಣಾರ ಜೀವನದ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ವಿಷಾದಿಸಿದರು.
ಸನ್ಮಾನ ಸ್ವೀಕರಿಸಿದ ಐಎಎಸ್ ಪರೀಕ್ಷೆ ಉತ್ತೀರ್ಣರಾದ ಇಸಿಕಾಸಿಂಗ್ ಅವರು, ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ನಿರಂತರ ಪ್ರಯತ್ನ, ಪರಿಶ್ರಮ ಅವಶ್ಯ ಎಂದರು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಗೆ ಸುಭಾಸಸಿಂಗ ಜಮಾದಾರ ಚಾಲನೆ ನೀಡಿದರು. ಪಿಎಚ್.ಡಿ ಪದವಿ ಪಡೆದ ಆಶಾ ಬಾತಖಂಡೆ ಮತ್ತು ವಿನಾಯಕಸಿಂಗ ರಜಪೂತ ಅವರನ್ನು ಸನ್ಮಾನಿಸಲಾಯಿತು.
ಲಕ್ಷ್ಮಣ ಗಂಡಗಾಳೇಕರ, ಸುಮೀತ ಕಲ್ಲೂರ, ಕಿರಣಸಿಂಗ ರಜಪೂತ, ರಾಜಾರಾಮಸಿಂಗ ರಾಜಪೂತ, ಪ್ರತಾಪಸಿಂಗ ಹಜಾರೆ, ಶೋಭಾ ಕಿಲ್ಲೇದಾರ, ರೂಪಾ ಜಮಾದಾರ, ಆಶಾ ಮತ್ತು ಲತಾ ರಾಜಪೂತ, ಎಂ.ಆರ್. ರಾಜಪೂತ, ಅಮರಸಿಂಗ ರಾಜಪೂತ, ನಾರಾಯಣಸಿಂಗ ರಾಜಪೂತ, ಬಲದೇವ ಠಾಕೂರ್, ಶ್ರೀನಿವಾಸ ಸಿಂಗ ರಾಜಪೂತ, ಮುಂತಾದವರು ಉಪಸ್ಥಿತರಿದ್ದರು.
ಸಮಾಜದ ಅಧ್ಯಕ್ಷ ರಾಮಸಿಂಗ ರಜಪೂತ ಸ್ವಾಗತಿಸಿದರು. ಉದಯಸಿಂಗ ಹಜಾರೆ ನಿರ್ವಹಿಸಿದರು. ಕಾರ್ಯದರ್ಶಿ ಹನುಮಂತ ಸಿಂಗ ಬಾತಖಂಡೆ ವಂದಿಸಿದರು.